ನೈಸರ್ಗಿಕ ಹೊಂಬೆಳಕು – ಧ್ರುವಪ್ರಭೆ

ಕೆಲವು ವೇಳೆ ರಾತ್ರಿಯ ಆಕಾಶದಲ್ಲಿ ಉಜ್ವಲವಾದ ಬಣ್ಣದ ಬೆಳಕು ಕಾಣಿಸುತ್ತದೆ. ಆಗ ಆಕಾಶ ಹಸಿರು, ಕೆಂಪು, ನೀಲಿ ಮತ್ತು ಹಳದಿ ಬಣ್ಣಗಳಿಂದ ಕೂಡಿದ ಉಜ್ವಲ ಕಾಂತಿಯನ್ನು ತಳೆಯುತ್ತದೆ. ಇಂತಹ ಒಂದು ಪ್ರಕೃತಿಗೆ ಧ್ರುವಪ್ರಭೆ ಅರೋರಾ ಬೊರಿಲಿಸ್ ಎನ್ನುತ್ತೇವೆ.

ಅರೋರಾ ಅನ್ನು ಧ್ರುವಪ್ರದೇಶ ಬೆಳಕು ಅಥವಾ ಉತ್ತರ ಧೃವ ಬೆಳಕು ಎಂದು ಕರೆಯಲಾಗುವ ನೈಸರ್ಗಿಕ ಬೆಳಕು. ಇದು ಹೆಚ್ಚಾಗಿ ಹಾಗೂ ಪ್ರಖರವಾಗಿ ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಾದ ಆರ್ಟಿಕ್ ಮತ್ತು ಅಂಟಾರ್ಟಿಕಾಗಳಲ್ಲಿ ಕಾಣುತ್ತದೆ. ಉತ್ತರ ಧೃವದ ಈ ಬೆಳಕನ್ನು ಅರೋರಾ ಬೊರಿಲಿಸ್ ಎಂತಲೂ, ದಕ್ಷಿಣ  ಧ್ರುವದಲ್ಲಿಯ ಈ ಬೆಳಕನ್ನು ಆಸ್ಟ್ರಲೀಸ್ ಎಂದೂ ಕರೆಯಲಾಗುತ್ತದೆ.

1619 ರಲ್ಲಿ ಖಗೋಳ ವಿಜ್ಞಾನಿ ಗೆಲಿಲಿಯೋ ಉತ್ತರ ಧ್ರುವದ ಈ ಬೆಳಕನ್ನು ಅರೋರಾ ಬೊರಿಲಿಸ್ ಎಂದು ಹೆಸರಿಸಿದನು. ಇದು ಬೆಳಕು ಹರಿಸುವ ರೋಮನ್ ದೇವತೆ ಹೆಸರು.

ಶ್ರೀಲಂಕಾದ ಪೂರ್ವಿಕರ ಈ ಬೆಳಕನ್ನು ಭಗವಾನ್ ಬುದ್ಧನಿಂದ ದಿವ್ಯ ಸಂದೇಶ ಎಂದು ಭಾವಿಸಿದ್ದರು.

ಈ ನಿಸರ್ಗದತ್ತ ಸುಂದರ ಧ್ರುವ ಪ್ರಭೆಯನ್ನು ಕೆನಡಾದ ಹಡ್ಸನ್ ಕೊಲ್ಲಿ ಪ್ರದೇಶದಲ್ಲಿ ಉತ್ತರ ಸ್ಕಾಟ್ಲೆಂಡ್‌ನಲ್ಲಿ ದಕ್ಷಿಣ ನಾರ್ವೆ ಮತ್ತು ಸ್ವೀಡನ್‌ನಲ್ಲಿ ನೋಡಬಹುದು. ದಕ್ಷಿಣ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಲ್ಲಿ ಸಹ ಪ್ರಭೆಯನ್ನು ಕಾಣಬಹುದು.

ಶ್ರೀಲಂಕಾ ಮೂಲ ನಿವಾಸಿಗಳು ಈ ಧ್ರುವ ಪ್ರಭೆಯನ್ನು ಭಗವಾನ್ ಬುದ್ಧನಿಂದ ಬಂದ ದಿವ್ಯ ಸಂದೇಶಗಳೆಂದು ಪರಿಗಣಿಸಿದ್ದರು.

ಇಂತಹ ಬೆಳಕು ಆಕಾಶದಲ್ಲಿ ಮೂಡಿಬರಲು ಕಾರಣಗಳೇನು ಎಂದು ಖಚಿತವಾಗಿ ತಿಳಿಯಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲವಾದರೂ, ವಾಯು ಮಂಡಲದಲ್ಲಿನ ಮೇಲುಸ್ತರದಲ್ಲಿ ವಿದ್ಯುಚ್ಛಕ್ತಿ ಉತ್ಪತ್ತಿಯಾಗುವುದೇ ಈ ದಿವ್ಯ ಪ್ರಭೆಗೆ ಕಾರಣ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ.

ಈ ಉಜ್ವಲ ಬೆಳಕಿಗೂ ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೂ ಒಂದು ರೀತಿಯ ಸಂಬಂಧವಿದೆ ಎಂಬುದನ್ನು ಇಂಗ್ಲೆಂಡಿನ ಖಗೋಳ ವಿಜ್ಞಾನಿ ಎಡ್ಮಂಡ್ ಹ್ಯಾಲಿ ರುಜುವಾತು ಪಡಿಸಿದರು.

ಸೂರ್ಯ ಒಂದು ಉರಿಯುವ ಚಂಡು. ಸೂರ್ಯನಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಘಟನಾ ಕ್ರಿಯೆ ಪರಿಣಾಮವಾಗಿ ಶಾಖ ಉತ್ಪತ್ತಿಯಾಗುತ್ತದೆ.

ಈ ಕ್ರಿಯೆಯಿಂದ ಪ್ರೊಟಾನ್ಸ್, ಎಲೆಕ್ಟ್ರಾನ್ಸ್ ಮುಂತಾದ ವಿದ್ಯುತ್‌ವಾಹಿ ಕಣಗಳು ಸತತವಾಗಿ ಬಿಡುಗಡೆಯಾಗುತ್ತಾ ಇರುತ್ತವೆ. ಹೀಗೆ ಈ ಕಣಗಳು ಬಿಡುಗಡೆಯಾಗುವುದಕ್ಕೆ ಸೌರ ಗಾಳಿ ಎನ್ನುತ್ತೇವೆ. ಈ ಕಣಗಳು ಸೆಕೆಂಡಿಗೆ 480 ಕಿ.ಮೀ. ವೇಗದಲ್ಲಿ ಎಲ್ಲಾ ದಿಕ್ಕುಗಳಲ್ಲೂ ಸಂಚರಿಸುತ್ತವೆ.

ಈ ಕಣಗಳು ಭೂ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ ಅಯಸ್ಕಾಂತೀಯ ಶಕ್ತಿ ಈ ಕಣಗಳು ಸಂಚರಿಸುವ ದಿಕ್ಕನ್ನು ಮತ್ತು ವೇಗವನ್ನು ಬದಲಾಯಿಸುತ್ತವೆ.

ಹೀಗೆ ದಿಕ್ಕುಗೆಟ್ಟ ಕಣಗಳು ಅತ್ಯಂತ ತಣ್ಣಗಿರುವ ಮೇಲಿನ ತೆಳು ವಾತಾವರಣದಲ್ಲಿ ಗಾಳಿಯ ಅತಿಸೂಕ್ಷ್ಮ ಕಣಗಳಿಗೆ ಬಡಿಯುತ್ತವೆ. ಇದರಿಂದ ವಿದ್ಯುದ್ವಿಭಜನೆಯಾಗುತ್ತದೆ. ತತ್ಪರಿಣಾಮವಾಗಿ ಬಣ್ಣದ ಬೆಳಕುಗಳು ಉತ್ಪತ್ತಿಯಾಗುತ್ತವೆ. ಈ ಬೆಳಕನ್ನೇ ಅರೋರಾಸ್ ಎಂದು ಕರೆಯುತ್ತೇವೆ.

ಭೂಮಿಯ ಅಯಸ್ಕಾಂತ ಕ್ಷೇತ್ರದಲ್ಲಿ ತಳಮಳ ಉಂಟಾದಾಗ ಈ ಬೆಳಕು ಅತ್ಯಂತ ಹೆಚ್ಚಾಗಿ ಕಾಣಬರುತ್ತವೆ. ಸೌರಕ್ರಿಯೆ ಅಸಾಧಾರಣವಾಗಿ ಹೆಚ್ಚಿದಾಗಲೂ ಸಹ ಈ ಬೆಳಕುಗಳು ಪದೇ ಪದೇ ಕಂಡುಬರುತ್ತವೆ.

 

Leave a Comment