‘ನೈಟ್ ಶಿಫ್ಟ್’ ನಿಜಕ್ಕೂ ಅಪಾಯ

ಜೀವನ ಶೈಲಿ ಬದಲಾಗುತ್ತಿದೆ, ಮೊದಲು ಬೆಳಿಗ್ಗೆ ಕೆಲಸ ಮಾಡಿ ರಾತ್ರಿ ಆರಾಮಾಗಿ ನಿದ್ದೆ ಮಾಡುತ್ತಿದ್ದರು. ಈಗ ರೂಟೀನ್ ಬದಲಾಗಿದೆ. ಸಮಯ ಸಿಕ್ಕಾಗ ಕಣ್ಣು ಮುಚ್ಚುವ ಜನರು ರಾತ್ರಿ ಕೂಡ ನಿದ್ರೆಯಿಲ್ಲದೆ ಕೆಲಸ ಮಾಡ್ತಾರೆ. ಎಂಎನ್‌ಸಿ ಸಂಸ್ಥೆಗಳು ಬೆಳೆದಿರುವ ಕಾರಣ ಕಾರ್ಪೋರೇಟ್ ವಲಯದಲ್ಲಿ ನೈಟ್ ಶಿಫ್ಟ್ ಸಾಮಾನ್ಯವಾಗಿದೆ.

ಆದರೆ ರಾತ್ರಿ ಕೆಲಸ ಮಾಡುವವರ ಆರೋಗ್ಯ ಬೇಗ ಹಾಳಾಗುತ್ತದೆ. ಐಟಿ, ಮೀಡಿಯಾ, ಬಿಪಿಓ, ಫ್ಯಾಶನ್ ಹೌಸ್, ಆಮದು-ರಫ್ತು ಹೀಗೆ ಕೈಗಾರಿಕಾ ವಲಯದಲ್ಲಿ ರಾತ್ರಿ ಶಿಫ್ಟ್ ಸಾಮಾನ್ಯ. ಸಂಶೋಧನೆಯ ಪ್ರಕಾರ ರಾತ್ರಿ ಶಿಫ್ಟ್ ನಲ್ಲಿ ಕೆಲಸ ಮಾಡುವ ಜನರು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಎದುರಿಸಬೇಕಾಗುತ್ತದೆಯಂತೆ.

ರಾತ್ರಿಯ ಕೆಲಸ ಮಾಡೋದ್ರಿಂದ ಮೆದುಳಿಗೆ ಸಾಕಷ್ಟು ವಿಶ್ರಾಂತಿ ಸಿಗೋದಿಲ್ಲ. ಐದು ವರ್ಷಗಳ ಅಥವಾ ಅದಕ್ಕಿಂತ ಹೆಚ್ಚು ಕಾಲ ನೀವು ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡ್ತಾ ಇದ್ರೆ ಇದು ನಿಮ್ಮ ಚಿಂತನೆಯ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಮರೆವು ಸೇರಿದಂತೆ ಅನೇಕ ತೊಂದರೆಗಳು ಕಾಡಲು ಶುರುವಾಗುತ್ತವೆ.

ರಾತ್ರಿ ಶಿಫ್ಟ್ ನಲ್ಲಿ ಕೆಲಸ ಮಾಡುವವರು ಹಗಲಿನಲ್ಲಿ ಸರಿಯಾಗಿ ನಿದ್ರೆ ಮಾಡಬೇಕು. ಹಗಲು ನಿದ್ರೆ ತಪ್ಪಿದ್ರೆ ಹಾಸಿಗೆ ಹಿಡಿಯೋದು ಗ್ಯಾರಂಟಿ. ಬೆಳಿಗ್ಗೆ ಮಲಗುವಾಗ ಆದಷ್ಟು ಕತ್ತಲೆ ಇರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.

ನೈಟ್ ಡ್ಯೂಟಿಗೆ ಹೋಗೋಕು ಮುಂಚೆ ಸ್ವಲ್ಪ ನಿದ್ದೆ ಮಾಡಬೇಕು. ಕೆಲಸ ಮಾಡುವಾಗ ಚಾಕೊಲೇಟ್, ಚಿಪ್ಸ್ ತಿನ್ನುವ ಬದಲು ಸಲಾಡ್ ಅಥವಾ ಹಣ್ಣು ತಿನ್ನಬೇಕು. ಚಹಾ, ಕಾಫಿ ಅಥವಾ ಪಾನೀಯಗಳನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿದ್ರೆ ಒಳ್ಳೇದು.

ಮನೆಗೆ ಬಂದು ಖಾಲಿ ಹೊಟ್ಟೆಯಲ್ಲಿ ನಿದ್ದೆ ಮಾಡಬಾರದು. ಸ್ವಲ್ಪ ತಿಂಡಿ ತಿಂದು ನಂತರ ನಿದ್ರೆ ಮಾಡುವುದು ಒಳ್ಳೆಯದು.

Leave a Comment