ನೈಜ ಘಟನೆಯ ಶಾರ್ದೂಲ

ನಿರ್ದೇಶಕ ಅರವಿಂದ್ ಕೌಶಿಕ್ ’ಶಾರ್ದೂಲ’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗಿಳಿಸಿ ಬಿಡುಗಡೆಯ ಹಂತಕ್ಕೆ  ತಂದಿದ್ದಾರೆ.

ದೈನಂದಿನ ಜೀವನದಲ್ಲಿ ಗೊತ್ತಿಲ್ಲದೆ ನಡೆಯುವ ಘಟನೆಗಳನ್ನಾಧರಿಸಿ ’ಶಾರ್ದೂಲ’ ಚಿತ್ರ ಮಾಡಲಾಗಿದೆ.

ಅಪರಿಚಿತ ಪ್ರದೇಶಕ್ಕೆ ತೆರಳಿದಾಗ ಅಲ್ಲಿ ನಡೆಯುವ ಘಟನೆಗಳು, ಕಾಣುವುದೆಲ್ಲ ಅಗೋಚರವಾಗಿಯೇ ಇರಲಿದೆ. ಇಂತಹ ವಿಷಯವನ್ನು ಮುಂದಿಟ್ಟುಕೊಂಡು ಚಿತ್ರದಲ್ಲಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ.

shardoola_157

ಚಿತ್ರಕ್ಕಾಗಿ ಹಳೆಯ ಬೆಂಜ್ ಕಾರು ಬೇಕಾಗಿತ್ತು. ಅದಕ್ಕಾಗಿ ತಲಾಶ್ ಮಾಡಿ, ಹುಡುಕಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಹೇಳಿಕೊಂಡರು.
ನಟ ಚೇತನ್ ಚಂದ್ರ ಉತ್ತಮ ಪಾತ್ರ ಸಿಕ್ಕಿದೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮತ್ತಷ್ಟು ಬ್ಯುಸಿಯಾಗುವ ವಿಶ್ವಾಸ ವ್ಯಕ್ತಪಡಿಸಿದರೆ, ನಟಿ ಕೃತಿಕಾ ರವೀಂದ್ರ ಪುಕ್ಕಲು ಹುಡುಗಿಯ ಪಾತ್ರ. ಶಾರ್ದೂಲ ಬಿಡುಗಡೆಯ ನಂತರ ಚಿತ್ರರಂಗದಿಂದ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ ಅಲ್ಲದೆ ಒಳ್ಳೆಯ ಹೆಸರು ಬರುವ ವಿಶ್ವಾಸವಿದೆ ಎಂದರು.
ಕಲಾವಿದರಾದ ರವಿತೇಜ, ಐಶ್ವರ್ಯ ಪ್ರಸಾದ್, ಕುಮಾರ್ ನವೀನ್, ಮಹೇಶ್ ಸಿದ್ದು ತಮ್ಮ ತಮ್ಮ ಪಾತ್ರಗಳ ಬಗ್ಗೆ ವಿವರ ನೀಡಿದರು. ಚಿತ್ರಕ್ಕೆ ಸತೀಶ್ ಆಚಾರ್ಯ ಸಂಗೀತ, ವೈ.ಬಿ.ಆರ್ ಮನು ಕ್ಯಾಮರಾ ಹಿಂದೆ ಕೆಲಸ ಮಾಡಿದ್ದಾರೆ.

Leave a Comment