ನೈಜತೆಯ ಥ್ರಿಲರ್‌ನ ಕಹಾನಿ

ಇತ್ತೀಚೆಗೆ ಹೊಸ ಹೊಸ ಆಲೋಚನೆಯೊಂದಿಗೆ ಚಿತ್ರಗಳು ತೆರೆಗೆ ಬರುತ್ತಿವೆ. ಅದರಲ್ಲಿ ವಿಕ್ಟೋರಿಯಾ ಮತ್ತು ಅಬ್ದುಲ್ ಕೂಡ ಒಂದು. ಶ್ರಬಾನಿ ಅವರ ಕಾದಂಬರಿ ವಿಕ್ಟೋರಿಯಾ ಮತ್ತು ಅಬ್ದುಲ್ ಆಧರಿಸಿ ಅದೇ ಹೆಸರಲ್ಲಿ ಚಿತ್ರ ತಯಾರಾಗಿದೆ. ಮೆಲೋಡ್ರಾಮವನ್ನು ಸ್ಟೀಫನ್ ಫ್ರೇಸ್ ತೆರೆಗೆ ತಂದಿದ್ದಾರೆ.
ರಾಣಿ ಮತ್ತು ಸೇವಕನ ನಡುವಿನ ಸಂಬಂಧವನ್ನು ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಎಡ್ಡಿ ಲಿಜಾರ್ಡ್, ಅದೀಲ್ ಅಕ್ತರ್, ಮೈಕಲ್ ಕಾಂಬನ್, ಸ್ಮಿತ್ ಸೇರಿದಂತೆ ಮತ್ತಿತರ ತಾರಾಗಣವೇ ಚಿತ್ರದಲ್ಲಿದೆ.
ಕೆನಡಾದಲ್ಲಿ ನಡೆಯಲಿರುವ ೪೨ನೇ ಟೋರೋಂಟೋ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ರಂಗಭೂಮಿಯ ಹಿನ್ನೆಲೆ ಹೊಂದಿರುವ ಆಲಿ ಫಜಲ್ ಚಿತ್ರವನ್ನು ತೆರೆಯ ಮೇಲೆ ಅದ್ಬುತವಾಗಿ ಚಿತ್ರಿಸಿಕೊಡಲು ಎಲ್ಲಾ ರೀತಿಯ ಸಹಾಯ ಸಹಕಾರ ನೀಡಿದ್ದಾರೆ.
ರಾಣಿ ವಿಕ್ಟೋರಿಯಾ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಮುಂದಿಟ್ಟುಕೊಂಡು ಚಿತ್ರವನ್ನು ಮೆಲೋಡಿ ಡ್ರಾಮವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಜೊತೆಗೆ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಅನೇಕ ಕಲಾವಿದರ ದಂಡೇ ಚಿತ್ರದಲ್ಲಿರುವುದು ಚಿತ್ರಕ್ಕೆ ಮತ್ತೊಂದು ಫ್ಲಸ್ ಪಾಯಿಂಟ್ ಆಗಿದೆ.
ಇತ್ತೀಚಿನ ದಿನಮಾನದ ಕಾಲಘಟ್ಟಕ್ಕೆ ಹೋಲಿಸಿದರೆ ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಇಡೀ ಚಿತ್ರತಂಡದ್ದು ಅದಕ್ಕೆ ಪೂರಕವಾಗಿ ಚಿತ್ರ ಮೂಡಿ ಬಂದಿರುವ ಪರಿ ಎಂತವರಲ್ಲಿಯೂ ಅತ್ಮ ವಿಶ್ವಾಸದ ಅಲೆಯನ್ನು ಹೆಚ್ಚಿಸುವಂತೆ ಮಾಡಿದೆ. ಒಟ್ಟಾರೆ ಚಿತ್ರ ಅದ್ಬುತವಾಗಿ ಮೂಡಿ ಬಂದಿದ್ದು ಎಲ್ಲರ ಗಮನ ಸೆಳೆಯಲಿದೆ ಎನ್ನುವ ವಿಶ್ವಾಸವಿದೆ.

ಮೈನವಿರೇಳಿಸುವ ಆಕ್ಷನ್

ಸೀಕ್ರೆಟ್ ಸರ್ವೀಸ್ ಕಾದಂಬರಿ ಆಧರಿಸಿ ಕಿಂಗ್ಸ್‌ಮನ್ ಗೋಲ್ಡ್‌ನ ಸರ್ಕಲ್ ಚಿತ್ರ ತಯಾರಾಗಿದೆ. ೨೦೧೪ರಲ್ಲಿ ತೆರೆಗೆ ಕಂಡಿದ್ದ ಚಿತ್ರದ ಮುಂದುವರಿದ ಭಾಗವಾಗಿ ಚಿತ್ರ ತೆರೆಯ ಮೇಲೆ ಬರುತ್ತಿದೆ. ನಿರ್ದೇಶಕ ಮಾಥ್ಯೂ ವಾಘನ್ ಚಿತ್ರವನ್ನು ನೈಜತೆಗೆ ಹತ್ತಿರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಘಟಾನುಘಟಿ ಕಲಾವಿದರಿದ್ದಾರೆ.ಅದರಲ್ಲಿ ಪ್ರಮುಖವಾಗಿ ಕೋಲಿನ್ ಫರ್ಥ್, ಜೂಲಿಯನ್ಸ್ ಮೋರ್, ಮಾರ್ಕ್ ಸ್ಟ್ರಾಂಗ್ ಹ್ಯಾಲೆ ಬೆರ್ರಿ, ಸೇರಿದಂತೆ ಮತ್ತಿತರಿದ್ದು ಮೈನವಿರೇಳಿಸುವ ಆಕ್ಷನ್ ಎಲ್ಲರ ಹೃದಯದ ಎದೆ ಬಡಿತ ಹೆಚ್ಚಿಸಲಿದೆ.

Leave a Comment