ನೇಮಕಾತಿ ಆದ್ಯತೆಗೆ ತಾಂತ್ರಿಕ ಪದವಿಧರರ ಪ್ರತಿಭಟನೆ

ರಾಯಚೂರು.ಫೆ.17- ಇತರೆ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ಇಲಾಖೆ ರಚಿಸಿ, ಇಂಜಿನಿಯರಿಂಗ್ ಹಾಗೂ ತಾಂತ್ರಿಕತೆಗೆ ಸಂಬಂಧಿತ ಯೋಜನೆ ಸಮರ್ಪಕ ಅನುಷ್ಠಾನದ ನೇಮಕಾತಿಯಲ್ಲಿ ಕೃಷಿ ಇಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳುವಂತೆ ಕೃಷಿ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿ ಸಂಘ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿತು.

ಇತ್ತೀಚಿಗೆ ಕೃಷಿ ಇಲಾಖೆಗೆ ಸಂಬಂಧಿತ ಖಾಲಿ ಹುದ್ದೆ ಭರ್ತಿಗಾಗಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಕೃಷಿ ಇಂಜಿನಿಯರಿಂಗ್ ಪದವೀಧರರನ್ನು ಪರಿಗಣಿಸದೇ ವಂಚಿಸಲಾಗಿದೆ. ದಿ.9 ರಂದು ಸರಕಾರ ಹೊರಡಿಸಿರುವ ಕೃಷಿ ಇಲಾಖೆ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ತಾಂತ್ರಿಕ ಪದವೀಧರರನ್ನು ಅರ್ಹತಾ ಪಟ್ಟಿಯಿಂದ ಕಡೆಗಣಿಸಿರುವ ಧೋರಣೆಯನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದರು. ಕೃಷಿ ಸಚಿವರು ಶೀಘ್ರವೇ ಎಚ್ಚೆತ್ತು ಮೇಲ್ಕಂಡ ಗೊಂದಲ ನಿವಾರಿಸಿ, ಇತರ ರಾಜ್ಯಗಳಂತೆ ರಾಜ್ಯದಲ್ಲಿಯೂ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ಇಲಾಖೆ ರಚಿಸಿ, ನೇಮಕಾತಿಯಲ್ಲಿ ತಾಂತ್ರಿಕ ಪದವೀಧರರನ್ನು ಪರಿಗಣಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ, ಎಚ್ಚರಿಸಲಾಯಿತು.

ಸಂಗೊಳ್ಳಿ ರಾಯಣ್ಣ ಯುವ ಸೇನಾ ಜಿಲ್ಲಾಧ್ಯಕ್ಷ ನಂದಾಕಟ್ಟಿಮನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಯೋಗಿ ಅಮರೇಶ, ವಿಜಯಕುಮಾರ, ಶಶಿಕಾಂತ ಇನ್ನಿತರರು ಉಪಸ್ಥಿತರಿದ್ದರು.

Leave a Comment