ನೇಮಕಾತಿಯಲ್ಲಿ ಅನ್ಯಾಯ:ಆರೋಪ

ಕಲಬುರಗಿ ಅ 12: ತಮಗಿಂತ ಕಡಿಮೆ ಅಂಕ ಇದ್ದವರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೀಡಿ ಅನ್ಯಾಯ ಎಸಗಲಾಗಿದೆ ಎಂದು ಜೇವರಗಿ ತಾಲೂಕಿನ ಜನಿವಾರ ಗ್ರಾಮದ ಯಲ್ಲಮ್ಮ ಎಂಬ ಮಹಿಳೆ ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಾಸಸ್ಥಳ ಪ್ರಮಾಣ ಪತ್ರ ಸಿಂಧುತ್ವದ ಅವಧಿಯ ಬಗ್ಗೆ ಸರಕಾರದ ಇಲಾಖೆಗಳ ನಡುವೆ ಇರುವ ಗೊಂದಲದಿಂದ ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ವಾಸಸ್ಥಳ ಪ್ರಮಾಣ ಪತ್ರದ ಸಿಂಧುತ್ವದ ಅವಧಿ 1 ವರ್ಷದವರೆಗೆ ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ. ಆದರೆ ನಾನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಸರಕಾರ ನಿಗದಿ ಪಡಿಸಿದ ಅವಧಿಯ ಪ್ರಮಾನ ಪತ್ರ ಸಲ್ಲಿಸಿದ್ದೇನೆ. ಆದರೂ ಶೇ 76 ರಷ್ಟು ಅಂಕವಿದ್ದ ನನ್ನನ್ನು ಹುದ್ದೆಗೆ ನಿರಾಕರಿಸಲಾಗಿದೆ ಎಂದರು

Leave a Comment