ನೇಪಾಳದ ರುದ್ರಕ್ಷಗಳ ಪ್ರದರ್ಶನ-ಮಾರಾಟ

ದಾವಣಗೆರೆ, ಸೆ.11 – ನಗರದ ಶಾಂತಿಪಾರ್ಕ್ ಹೋಟೆಲ್ ಸಭಾಂಗಣದಲ್ಲಿ ನಾಳೆಯಿಂದ ಸೆ. 17ರವರೆಗೂ ನೇಪಾಳದ ರುದ್ರಾಕ್ಷಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ನರೇಂದ್ರ ಕಾಶಿರೆಡ್ಡಿ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಇಂಡಸ್ -ನೇಪಾಳ ರುದ್ರಕ್ಷ ಸಂಸ್ಥೆಯಿಂದ ಮೂರನೇ ಬಾರಿಗೆ ರುದ್ರಕ್ಷಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ಪ್ರದರ್ಶನ ನಡೆಯಲಿದೆ. ಪ್ರಮುಖವಾಗಿ ಏಕಮುಖ ಹೊಂದಿರುವ 4 ಲಕ್ಷ ಬೆಲೆಯುಳ್ಳ ರುದ್ರಕ್ಷವನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಇದರ ಜೊತೆಗೆ ಅರ್ಧಚಂದ್ರಾಕೃತಿ, 21 ಮುಖಗಳುಳ್ಳ ರುದ್ರಕ್ಷ, ಗೌರಿಶಂಕರ, ಗಣೇಶ,ಏಕಸ್ವರ ರುದ್ರಾಕ್ಷ, ವಿವಿಧ ಬಗೆಯ ಸಿದ್ದಮಾಲೆ, ಸ್ಪಟಿಕ, ಜಪ, ತುಳಸಿ, ಶಿವ, ಜ್ಞಾನಮಾಲೆ ಹಾಗೂ ವಿವಿದ ಸಾಲಿಗ್ರಾಮ ಮಾರಾಟಕ್ಕೆ ಸಿಗಲಿವೆ ಎಂದು ತಿಳಿಸಿದರು.

Leave a Comment