ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ! ಪ್ರಾಣದ ಹಂಗು ತೊರೆದು ರಕ್ಷಣೆಗೆ ಯತ್ನಿಸಿದ್ದ ಮುಸ್ಲಿಂ ಬಾಂಧವರು!!

ಮಂಗಳೂರು, ಮೇ ೨೫- ಕಲ್ಲಡ್ಕ ನಿವಾಸಿ ಯುವಕನೋರ್ವ ಪಾಣೆಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ನಿಶಾಂತ್(೨೫) ಎಂದು ಗುರುತಿಸಲಾಗಿದೆ. ನಿಶಾಂತ್ ನದಿಗೆ ಹಾರುವುದನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ಬಾಂಧವರು ಪ್ರಾಣದ ಹಂಗು ತೊರೆದು ಮೇಲಕ್ಕೆತ್ತಿದ್ದು ಯುವಕ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.
ನಿಶಾಂತ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈದ್ ಸಂಭ್ರಮದಲ್ಲಿದ್ದರೂ ಸ್ಥಳೀಯ ಈಜುಪಟುಗಳಾದ ಶಮೀರ್, ಮುಹಮ್ಮದ್, ಮೊಮ್ಮು, ತೌಸೀಫ್, ಝಾಹಿದ್ ಜಾಯಿ, ಅಕ್ಕರಂಗಡಿಯ ಮುಕ್ತಾರ್, ಆರಿಫ್ ಹೈವೇ ಎಂಬವರು ನೀರಿಗೆ ಹಾರಿ ರಕ್ಷಣೆ ಮಾಡಿದರೂ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.

Share

Leave a Comment