ನೇತ್ರದಾನ ಮಹಾದಾನ : ಹೆಚ್.ಎಸ್.ಸುಂದರರಾಜ್

ಹಿರಿಯೂರು.ಆ.9: ನೇತ್ರದಾನ ಮಹಾದಾನ ಸತ್ತಮೇಲೆ ಕಣ್ಣುಗಳನ್ನು ಮಣ್ಣು ಮಾಡದೇ ಅದನ್ನು ದಾನ ಮಾಡಿ ಎರಡು ಜೀವಗಳಿಗೆ ಬೆಳಕು ನೀಡಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಎಸ್.ಸುಂದರರಾಜ್ ಹೇಳಿದರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್, ಇನ್ನರ್‍ವೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ವಿವಿ ಪುರ ಗ್ರಾಮದ ಪ್ರಾಥಮಿಕ ಆರೊಗ್ಯ ಕೆಂದ್ರದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ಅಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ಕ್ಲಬ್ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಜೀವನ ನಡೆಸುವದೇ ಕಷ್ಟ ಅದರಲ್ಲೂ ಕಣ ್ಣನ ಚಿಕಿತ್ಸೆಗೆ ಹತ್ತು ಸಾವಿರ ಖರ್ಚು ಬರುತ್ತದೆ ಆದುದರಿಂದ ಬಡವರಿಗೆ ಸಹಾಯವಾಗಲಿ ಎಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಹ ಆಯುಕ್ತರಾದ ಶಶಿಕಲಾ ರವಿಶಂಕರ್ ರವರು ಪಂಚೇಂದ್ರಿಯಗಳಲ್ಲಿ ಕಣ್ಣು ಅತಿ ಮುಖ್ಯ ವಾದದ್ದು ಅದು ಕುರುಡಾದರೆ ಜೀವನವೆಲ್ಲಾ ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ ಆದರಿಂದ ಕಣ್ಣುಗಳ ರಕ್ಷಣೆ ತುಂಬಾ ಅಮೂಲ್ಯವಾದದ್ದು ಎಂದರು. ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಪದ್ಮಜಾ ಎಂ ಶೇಟ್ಟಿ ಪ್ರಾರ್ಥಿಸಿದರು, ರೋಟರಿ ಕ್ಲಬ್ ಸಹ ಕಾರ್ಯದರ್ಶಿ ಎಂ.ವಿ ಹರ್ಷ ಸ್ವಾಗತಿಸಿದರು, ಸ್ಕೌಟ್ಸ್ ಮಾಸ್ಟರ್ ಜಿ.ಬಿ. ಪರಮೇಶ್ವರಪ್ಪ ನಿರೂಪಿಸಿದರು ರೋಟರಿ ಕಾರ್ಯದರ್ಶಿ ಹೆಚ್.ವೆಂಕಟೇಶ್ ವಂದಿಸಿದರು. ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷರಾದ ಸಪ್ನಾಸತೀಶ್, ಡಾ.ಸುನೀತ, ನಾಗಣ್ಣ, ಪಿ.ವಿ.ಚಂದ್ರಶೇಖರ್, ಚಂದ್ರವದನ, ಉಮಾರಾಜಶೇಖರ್, ಮತ್ತಿತರರು ಉಪಸ್ಥಿತರಿದ್ದರು.

Leave a Comment