ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಕಲಬುರಗಿ ಆ 27: ನಗರದ ರೋಜಾ ಪ್ರದೇಶದ ನೂರಾನಿ ಮೊಹಲ್ಲಾ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡು ಬಂದಿದೆ.

ಜುಬೇನಾ ಫಾತಿಮಾ ಜಮೀರ್ ಖುರೇಷಿ (34) ಎಂಬ ಮಹಿಳೆಯ ಶವ ಪತ್ತೆಯಾಗಿದ್ದು ತನಿಖೆಯ ನಂತರವೇ ಸಾವಿನ ನಿಖರ  ಕಾರಣ ಗೊತ್ತಾಗಲಿದೆ. ಮಹಾರಾಷ್ಟ್ರದ ಅಕ್ಕಲಕೋಟೆ ಮೃತ ಮಹಿಳೆಯ ತವರೂರು. ಜಮೀರ್ ಖುರೇಷಿ ಎಂಬುವರೊಂದಿಗೆ 14 ವರ್ಷದ ಹಿಂದೆ ಜುಬೇನಾ ಫಾತಿಮಾ ಅವರ ಮದುವೆಯಾಗಿತ್ತು. ಅವರಿಗೆ 4 ಜನ ಮಕ್ಕಳಿದ್ದಾರೆ.

ಜಮೀರ್ ಖುರೇಷಿ ಎರಡನೆಯ ಮದುವೆಯನ್ನು ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯದ್ದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತನಿಖೆ ನಂತರ ತಿಳಿದುಬರಲಿದ್ದು, ತವರು ಮನೆಯವರು ಬಂದ ನಂತರ ಅವರು ನೀಡುವ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Leave a Comment