ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಕಲಘಟಗಿ ಎ.15-ತಾಲೂಕಿನ ತುಮರಿಕೊಪ್ಪ ಗ್ರಾಮದ  ಗಂಗಮ್ಮ ತಂದೆ ತೋಟಪ್ಪ ಸೊರಟೂರ ವಯಾ: 16 ವರ್ಷ, ಸಾಕಿನ್: ತುಮರಿಕೊಪ್ಪ ಇವಳು ಸುಮಾರು ಒಂದುವರೆ ವರ್ಷದಿಂದ ಗಾಳಿಯ ಶಕದಂತೆ ಆಗಿ, ತನ್ನಷ್ಟಕ್ಕೆ ತಾನೇ ಇರುತ್ತಿದ್ದು ಯಾರೊಂದಿಗೂ ಹೆಚ್ಚಿಗೆ ಮಾತನಾಡದೇ ಒಬ್ಬಳೇ ಇರುತ್ತಿದ್ದು,  ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತನಗಿದ್ದ ಗಾಳಿಯ ಶಕದ ತೊಂದರೆಯಿಂದ ತಾನಾಗಿಯೇ ತನ್ನ ವಾಸದ ಮನೆಯ ಮಲಗುವ ಕೋಣೆಯ ಮೇಲಿನ ಕಟ್ಟಿಗೆಗೆ ಪತ್ತಲ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ತಾಯಿ ವರದಿ ಕೊಟ್ಟಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Leave a Comment