ನೇಗಿಲ ಒಡೆಯನ ಸಾಧನೆಯ ಅನಾವರಣ

ರೈತ ದೇಶದ ಬೆನ್ನೆಲುಬು.ರೈತನನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ, ಆತನೂ ಸಾಧನೆ ಮಾಡಬಲ್ಲ ಎಂಬ ಸಂದೇಶ ಹೇಳುವ ಚಿತ್ರ ’ನೇಗಿಲ ಒಡೆಯ’ ಈಗಾಗಲೇ ಚಿತ್ರೀಕರಣ ಮುಗಿಸಿ ಚಿತ್ರೀಕರಣದ ನಂತರದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಎನ್.ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ಸದಭಿರುಚಿಯ ನೆಲೆಗಟ್ಟಿನಲ್ಲಿ ಚಿತ್ರವನ್ನು ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ಸದ್ಯದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಂಡ ಮುಂದಾಗಿದೆ.
ಅಗ್ರಿಕಲ್ಚರಲ್ ಡಿಪ್ಲೋಮಾ ಮುಗಿಸಿದ ನಾಯಕ ಹಳ್ಳಿಗೆ ಬಂದು ವ್ಯವಸಾಯ ಮಾಡಿಕೊಂಡು ಶ್ರೀಮಂತ ಯುವತಿಯ ಪ್ರೇಮದಲ್ಲಿ ಬೀಳುತ್ತಾನೆ. ನಾಯಕಿಯ ತಂದೆ ಒಬ್ಬ ರೈತನಿಗೆ ಮಗಳನ್ನು ಕೊಡಲು ನಿರಾಕರಿಸುತ್ತಾನೆ. ನಾಯಕ ವಿಶ್ವಮಟ್ಟದಲ್ಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುವ ಮೂಲಕ ರೈತರನ್ನು ಕಡೆಗಣಿಸಬೇಡಿ ಎಂದು ಸಂದೇಶ ನೀಡುತ್ತಾನೆ ಇದು ಚಿತ್ರದ ಕಥಾಹಂದರ.
ಚಿತ್ರವನ್ನು ಬಳ್ಳಾರಿ, ಸಂಡೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕ್ಟರಿ ಡ್ಯಾನಿಯಲ್ ಸಂಗೀತ ನೀಡಿದ್ದಾರೆ, ಸದ್ಯದಲ್ಲೇ ನೇಗಿಲ ಒಡೆಯನ ಹಾಡುಗಳನ್ನು ಹಾಗೂ ಟೀಸರನ್ನು ನೋಡಬಹುದಾಗಿದೆ.
ಸುರ್ಯೋದಯ ಮೂವಿಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಿಕ್ಟರಿ ಡ್ಯಾನಿಯಲ್ ಸಂಗೀತ, ಎಸ್.ಬಾಲು ಛಾಯಾಗ್ರಹಣ, ಸಿ.ಎನ್.ಮೂರ್ತಿ ಚಿತ್ರಕಥೆ, ಸಹನಿರ್ದೇಶನ, ಮಂಜು ಸಂಕಲನ, ಕ್ರೇಜಿ ಶ್ರೀಧರ್ ನೃತ್ಯ ನಿರ್ದೇಶನ, ಹೇಮಂತ್, ಸಿ.ಎನ್.ಮೂರ್ತಿ ಸಾಹಿತ್ಯವಿದೆ. ಭಾನುಪ್ರಕಾಶ್, ಪ್ರಿಯಾಪಾಂಡೆ, ಅಮರನಾಥ್ ಆರಾಧ್ಯ, ಶ್ರೀಬಲರಾಮ್, ಜಯಣ್ಣ, ಜಿಮ್‌ಶಿವು, ಬಳ್ಳಾರಿ ಮಂಜು ಅಶೋಕ್, ನಾಗರಾಜ್, ಹೇಮಂತ್, ಮೂರ್ತಿ, ವೆಂಕಟೇಶ್, ಮಾಠಮ್‌ನಾಗಭೂಷಣ್, ಯಾಸೀನ್, ಅಜಿತ್ ಇನ್ನು ಮುಂತಾದವರ ತಾರಾಬಳಗವಿದೆ.

ರೈತನ ಕುರಿತಾದ ಚಿತ್ರಗಳು ಇತ್ತೀಚೆಗೆ ತೀರಾ ಅಪರೂಪ. ಅಂತಹುದರಲ್ಲಿ ಹೊಸ ತಂಡ ಹೊಸ ಹುರುಪಿನೊಂದಿಗೆ ನೇಗಿಲ ಒಡೆಯ ಚಿತ್ರವನ್ನು ಪೂರ್ಣಗೊಳಿಸಿದ್ದು ಸದ್ಯದಲ್ಲಿಯೇ ಟ್ರೈಲರ್ ಬಿಡುಗಡೆ ಮಾಡಲು ಮುಂದಾಗಿದೆ.

Leave a Comment