ನೆರೆ ಸಂತ್ರಸ್ಥರಿಗೆ ನಿಮಿಷಾಂಬ ; ದೇವಾಲಯದಿಂದ ನೆರವಿನ ಹಸ್ತ

ಶ್ರೀರಂಗಪಟ್ಟಣ, ಆ. 21- ಮಡಿಕೇರಿ ನೆರೆ ಸಂತ್ರಸ್ಥರಿಗೆ ಗಂಜಾಂನ ಶ್ರೀನಿಮಿಷಾಂಬ ದೇವಾಲಯದ ವತಿಯಿಂದ 1160 ಸೀರೆಗಳು ಹಾಗೂ 33.60 ಕ್ವಿಂಟಾಲ್ ಅಕ್ಕಿಯನ್ನು ರವಾನಿಸಲಾಯಿತು.
ಶಾಸಕ ರವೀಂದ್ರ ಶ್ರೀಕಂಠಯ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಡಿಕೇರಿಗೆ ತೆರಳಲಿರುವ ವಾಹನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ಪ್ರತೃತಿ ವಿಕೋಪಕ್ಕೆ ತುತ್ತಾಗಿರುವ ಮಡಿಕೇರಿ ಜಿಲ್ಲೆಗೆ ಇಡೀ ಕರ್ನಾಟಕದ ಜನತೆ ಕೈ ಜೋಡಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವೂ ಸಹ ಅವರೊಂದಿಗಿದ್ದು, ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ವ್ಯವಸ್ಥಾನಾ ಸಮಿತಿ ಅಧ್ಯಕ್ಷ ಗಂಜಾಂ ಶಿವು, ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್ ಸೇರಿದಂತೆ ಪುರಸಭೆ ಸದಸ್ಯರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Comment