ನೆರೆ ವೀಕ್ಷಣೆ ವೇಳೆ ಅಧಿಕಾರಿಗಳಿಗೆ ಸಿದ್ದು ತರಾಟೆ

ಬಾದಾಮಿ, ಅ 23: ನೆರೆ ಸಂತ್ರಸ್ತರ ಸ್ಥಳಗಳಿಗೆ ಭೇಟಿ ನಿಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರವಾಹ ಸ್ಥಳಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಗೈರಾಗಿದ್ದು, ಕೆಂಡಾಮಂಡಲವಾದ ಸಿದ್ದರಾಮಯ್ಯ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಏ ಎಲ್ಲಿದ್ದಾರೆ ಅಧಿಕಾರಿಗಳು…? ಸಂತ್ರಸ್ತರು ಸಮಸ್ಯೆ ಹೇಳಿಕೊಂಡಾಗ ಸ್ಥಳದಲ್ಲಿ ಇರುವುದನ್ನು ಬಿಟ್ಟು ಕತ್ತೆ ಕಾಯಲಿಕ್ಕೆ ಹೋಗಿದ್ದೀರಾ ಎಂದು ತಹಸಿಲ್ದಾರ್ ವಸ್ತ್ರದ ವಿರುದ್ಧ ಕೆಂಡಾಮಂಡಲಗೊಂಡರು.
ಇಷ್ಟೋತ್ತು ಏನು ಮಾಡುತ್ತಿದ್ದೀ… ನನಗಿಂತ ಮುಂಚೆ ಬಂದು ಇರಬೇಕಾ ಬೇಡವಾ… ಸಂತ್ರಸ್ತರು ಸಮಸ್ಯೆ ಆಲಿಸಲು ಏಕೆ ಬರಲಿಲ್ಲ
ಎಂದು ತಹಸಿಲ್ದಾರ್‍ಗೆ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು.
ಅಷ್ಟರಲ್ಲೇ ತಹಸಿಲ್ದಾರ್ ವಸ್ತ್ರದ್ ಪ್ರತಿಕ್ರಿಯಿಸಿ ರಸ್ತೆ ಬಂದ್ ಆಗಿತ್ತು ಸರ್.. ಅದನ್ನು ಕ್ಲೀಯರ್ ಮಾಡಿಸೋಕ್ಕೆ ಹೋಗಿದ್ದೆ ಎಂದು ಹೇಳಿದರು.
ಗೋವನಕೊಪ್ಪ ಸಂತ್ರಸ್ತರ ಸಮಸ್ಯೆ ಆಲಿಸುವ ವೇಳೆಯಲ್ಲಿ ಆಲೂರಎಸ್‍ಕೆ ಗ್ರಾಮ ಪಂಚಾಯಿತಿ ಪಿಡಿಓಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ಚೇರ್‍ಮನ್ ಹೇಳಿದರೂ ಕೇಳಬೇಡ. ಜನರ ಸಮಸ್ಯೆಗೆ ಸ್ಪಂದಿಸಿ, ಜನರ ಕೆಲಸ ಮಾಡಿಕೊಡು ಇಲ್ಲದಿದ್ದರೆ ನೀನು ಸಸ್ಪೆಂಡ್ ಆಗುತ್ತಿಯಾ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಲಪ್ರಭಾ ನದಿ ಪ್ರವಾಹಕ್ಕೆ ಕೊಚ್ಚಿಹೋದ ಗೋವನಕೊಪ್ಪ ಸೇತುವೆ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು ರಸ್ತೆ ಕಾಮಗಾರಿ ಶೀಘ್ರವೇ ಮುಗಿಸಬೇಕೆಂದು ಸೂಚನೆ ನೀಡಿದ ಸಿದ್ದರಾಮಯ್ಯ ಈ ಬಗ್ಗೆ ಲೋಕೋಪಯೋಗಿ ಸಚಿವ ಗೋವಿಂದ್ ಕಾರಜೋಳ್ ಅವರ ಜೊತೆಗೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

Leave a Comment