ನೆರೆಹಾವಳಿ ಪ್ರದೇಶಗಳಿಗೆ ವಿವಸಂ ಸದಸ್ಯರ ಬೇಟಿ

ಧಾರವಾಡ ಅ.14- : ಇತ್ತೀಚಿನ ನೆರೆಹಾವಳಿ, ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಮತ್ತು ಸಂತ್ರಸ್ಥರನ್ನು ಬೆಟ್ಟಿಯಾಗಲು ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾದ ಶಿವಣ್ಣ ಬೆಲ್ಲದರವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಸಂಘದ ಸದಸ್ಯರು, ಸಾರ್ವಜನಿಕ ಸಂಘ, ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ತಂಡ ಭೆಟ್ಟಿ ನೀಡಲಿದೆ. ಈ ತಂಡವು ಈ ಘಟನೆಯಿಂದಾಗಿ ಆದ ಕಷ್ಟ  ನಷ್ಟಗಳನ್ನು ಮತ್ತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಅಧ್ಯಯನ ಮಾಡಲು ಈ ತಂಡ ಭೆಟ್ಟಿ ಕೊಡಲಿದೆ. ಈ ಘಟನೆಯಿಂದ  ಆದ ಸಂತ್ರಸ್ತರಿಗೆ ಅಕ್ಷರಶಹ ಮುಂದಿನ ಅವಶ್ಯಕ ನೆರವು ಏನೇನು ಬೇಕು ಎನ್ನುವ ಕುರಿತು ಸಂತ್ರಸ್ತರನ್ನು ಖುದ್ದಾಗಿ ಭೆಟ್ಟಿಯಾಗಿ ಬಾಧಿತ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ ಅಧ್ಯಯನ ಮಾಡಲು ಈ ತಂಡ ನೆರೆಹಾವಳಿಪೀಡಿತ ಪ್ರದೇಶಗಳಿಗೆ ಭೆಟ್ಟಿ ಕೊಡಲಿದೆ ಭೆಟ್ಟಿಯ ನಂತರ ಸಮಗ್ರ ವರದಿಯನ್ನು ಸಿದ್ದಪಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಲ್ಲಿಸಿ ಶಾಶ್ವತ ಪರಿಹಾರ ದೊರಕಿಸಲು ಸಂಘದ ಕೋರಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ ಎಸ್. ಉಡಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment