ನೆನಪಾಗುತ್ತದೆ ಡಾ. ರಾಜ್ ಕುಮಾರ್ ಎರಡು ಕನಸು

ಎರಡು ಕನಸು ಎಂದಾಕ್ಷಣ ದೊಡ್ಡ ಮಾಮ (ಡಾ, ರಾಜ್‌ಕುಮಾರ್) ನೆನಪಾಗುತ್ತಾರೆ. ಚಿತ್ರದ ಹೆಸರು ಹೇಳುತ್ತಿದ್ದಂತೆ ಜನರು ಡಾ. ರಾಜ್ ಕುಮಾರ್ ಮತ್ತು ಹಾಡುಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಚಿತ್ರವನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನನ್ನಿಂದ ಸಾಧ್ಯವಾಗುತ್ತಾ, ಜನ ಹೇಗೆ ತಗೋತಾರೋ ಅನ್ನೋ ಆತಂಕ ಇತ್ತು ಈಗಲೂ ಇದೆ” ನಾಯಕ ನಟ ವಿಜಯರಾಘವೇಂದ್ರ ತಮ್ಮ ಎರಡು ಕನಸು ಚಿತ್ರದ ಬಗ್ಗೆ ತಮ್ಮೊಳಗೆ ಇರುವ ಆತಂಕವನ್ನು ಹೇಳಿದರೂ ಚಿತ್ರ ಚೆನ್ನಾಗಿ ಬಂದಿರುವ ವಿಶ್ವಾಸದಲ್ಲಿದ್ದಾರೆ.

ಈ ತಿಂಗಳ ೧೦ರಂದು ಸುಮಾರು ೧೦೦ ಚಿತ್ರಮಂದಿರಗಳಲ್ಲಿ ಚಿತ್ರದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ನಿರ್ದೇಶಕ ಮದನ್ ಚಿತ್ರದ ಹೆಸರು ಎರಡು ಕನಸು ಎಂದು ಹೇಳಿದಾಗ ಶಾಕ್ ಆಯ್ತು   ಜೊತೆಗೆ ಕಥೆ ಹೇಳಿದಾಗ ಮಾಡಬಹುದೆನ್ನುವ ನಂಬಿಕೆ ಬಂತು ಎಂದು ಹೇಳಿಕೊಂಡರು. ಒಳ್ಳೆ ಕಥೆ ಇದ್ದರೆ ಕನ್ನಡಿಗರು ಚಿತ್ರ ನೋಡುತ್ತಿದ್ದಾರೆ. ಅದೇ ರೀತಿಯಲ್ಲಿ ಎರಡು ಕನಸು ಇಷ್ಟವಾಗುತ್ತದೆ ಎನ್ನುವ ಆಶಯ ಅವರಲ್ಲಿದೆ.

ನಿರ್ದೇಶಕ ಮದನ್  ನಾಯಕನ ಎರಡು ಕನಸುಗಳಲ್ಲಿ ಒಂದು ಸತ್ತಾಗ ಅದನ್ನು ಬದುಕಿಸು ಪ್ರಯತ್ನ ಚಿತ್ರದಲ್ಲಿದೆ ಎಂದಿದ್ದು ಡಾ, ರಾಜ್ ಕುಮಾರ್ ಅವರ ಎರಡು ಕನಸು ಚಿತ್ರಕ್ಕೆ ಹೋಲಿಸಿಯೇ ಮಾಡಿರಬಹುದೆನ್ನುವ ಸುಳಿವು ಕೊಟ್ಟಿತು. ಅವರು ವಿಜಯರಾಘವೇಂದ್ರ ಅಭಿನಯಿಸದೆ ಇದ್ದಿದ್ದರೆ ಈ ಚಿತ್ರವನ್ನು ಮತ್ತೊಬ್ಬರಿಗೆ ಮಾಡುತ್ತಿರಲಿಲ್ಲವಂತೆ. ಅವರ ಪ್ರಕಾರ ಚಿತ್ರದ ಕಥೆ ಎಕ್ಸಲೆಂಟ್ ಆಗಿ ಬಂದಿದೆ.

ರಾಜ್ ಕುಮಾರ್ ಚಿತ್ರಕ್ಕೂ ಇದಕ್ಕೂ ಬರೀ ಶೀರ್ಷಿಕೆಯ ಮಾತ್ರವೆ ಅಥವಾ ಬೇರೆ ಯಾವ ಅಂಶಗಳು ಹೋಲುತ್ತದೆ ಎನ್ನುವುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ ಅದರಲ್ಲಿ ಇದ್ದಂತೆ ಇದರಲ್ಲಿಯೂ ಇಬ್ಬರು ನಾಯಕಿರಿದ್ದಾರೆ ಮಂಜುಳ ರೀತಿಯಲ್ಲಿರುವ ಪಾತ್ರ ಮಾಡಿದ್ದಾರಂತೆ ಕಾರುಣ್ಯ ರಾಮ್. ಸ್ವಾತಿ ಹೆಸರಿನ ಪಾತ್ರ ಮಾಡಿದ್ದು,ಪಾತ್ರಕ್ಕೆ ಹೋಮ್ಲಿ, ಲವ್ಲಿ ಹೀಗೆ ಎಲ್ಲಾ ತರಹದ ಶೇಡ್‌ಗಳಿದೆ ಈ ಚಿತ್ರ ಗೆದ್ದರೆ ತಮಗೆ ವಜ್ರಕಾಯ ಮತ್ತು ಕಿರಗೂರಿನ ಗಯ್ಯಾಳಿಯರು ಚಿತ್ರಗಳ ನಂತರದಲ್ಲಿ ಹ್ಯಾಟ್ರಿಕ್ ಸಕ್ಸಸ್  ಸಿಕ್ಕ ಖುಷಿಯಾಗುತ್ತೆ ಎಂದು    ತಮ್ಮದೇ  ಆದ   ಕನಸನ್ನು ಕಣ್ಣರಳಿಸಿ ಹೇಳಿಕೊಂಡರು. ಬಿಗ್‌ಬಾಸ್ ನಂತರದಲ್ಲಿ    ಚಿತ್ರದಿಂದ ಒಂದು ಯಶಸ್ಸಂತು ಕಾರುಣ್ಯಗೆ ಬೇಕಿದೆ. ಮತ್ತೊಬ್ಬ        ನಾಯಕಿ ಕೃಷಿ ವರದಿಗಾರ್ತಿಯಾಗಿ ನಟಿಸಿದ್ದು, ತಮ್ಮದು  ಶ್ರುತಿ ಹೆಸರಿನ  ಬಬ್ಲಿಯಾಗಿರುವ ಜೊತೆಗೆ ತರ್‍ಲೆ ಮಾಡುವಂಥ ಪಾತ್ರವಾಗಿದೆ ಎಂದಿದ್ದಾರೆ.

ಎರಡು ಕನಸು ಚಿತ್ರದ ಹೆಸರು ಡಾ. ರಾಜ್ ಕುಮಾರ್, ಕಲ್ಪನಾ ಮತ್ತು ಮಂಜುಳರನ್ನು ನೆನಪಿಸುತ್ತದೆ. ಕಥೆ ಜೊತೆಗೆ ಅದರಲ್ಲಿನ ಹಾಡುಗಳಿಗೆ ಇಂದಿಗೂ ಜನಪ್ರಿಯತೆ ಇದೆ.  ಹೆಸರಿನಿಂದ ಹಿಂದಿನ ಚಿತ್ರದ ನೆನಪಿಗೆ ಕರೆದೊಯ್ದಿರುವ ಈ ಹೊಸ ಎರಡು ಕನಸು ಎಷ್ಟರ ಮಟ್ಟಿಗೆ ಜನರನ್ನು ತಲುಪುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

Leave a Comment