ನೂರಸುಲ್ತಾನ್ ನಲ್ಲಿ ಭಾರತ-ಪಾಕ್ ಡೇವಿಸ್ ಕಪ್

ನವದೆಹಲಿ, ನ.19 – ಭಾರತ ಮತ್ತು ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯ ನವೆಂಬರ್ 29-30ರಂದು ಕಜಕಿಸ್ತಾನ್ ರಾಜಧಾನಿ ನೂರ್ ಸುಲ್ತಾನ್ ನಲ್ಲಿ ನಡೆಯಲಿದೆ.
ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನನಿಂದ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸುವಂತೆ ಭಾರತ ಕೇಳಿಕೊಂಡಿತ್ತು. ನಿಯಮಗಳಂತೆ ತಟಸ್ಥ ಸ್ಥಳದ ಆಯ್ಕೆ ಪಾಕ್ ಕೈಎಲ್ಲಿತ್ತು. ಆದರೆ, ತಟಸ್ಥ ಸ್ಥಳಕ್ಕೆ ವರ್ಗಾಯಿಸದನ್ನು ಪಾಕ್ ಖಂಡಿಸಿತ್ತು. ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಪಂದ್ಯವನ್ನು ನೂರ್ ಸುಲ್ತಾನ್‌ನಲ್ಲಿ ನಡೆಸಲು ಅಧಿಕೃತ ಪ್ರಕಟಣೆ ನೀಡಿದೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಂದ್ಯದ ಬಗ್ಗೆ ಭಾರತೀಯ ಟೆನಿಸ್ ಆಟಗಾರರು ಭದ್ರತಾ ಕಳವಳ ವ್ಯಕ್ತಪಡಿಸಿದ್ದರು, ಅದರ ನಂತರ ಐಟಿಎಫ್‌ನ ಸ್ವತಂತ್ರ ಸಮಿತಿಯು ನವೆಂಬರ್ 4 ರಂದು ಡೇವಿಸ್ ಕಪ್ ಸಮಿತಿಯ ನಿರ್ಧಾರವನ್ನು ತಟಸ್ಥ ಸ್ಥಳದಲ್ಲಿ ನಡೆಸುವ ನಿರ್ಧಾರವನ್ನು ಬೆಂಬಲಿಸಿತ್ತು. ಪಾಕಿಸ್ತಾನ ಟೆನಿಸ್ ಅಸೋಸಿಯೇಷನ್ ಐಟಿಎಫ್ ನಿರ್ಧಾರ ವಿರೋಧಿಸಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ತಟಸ್ಥ ಸ್ಥಳವಾಗಿ ಆಯ್ಕೆಯಾದ ನೂರ್ ಸುಲ್ತಾನ್‌ನಲ್ಲಿ ಡೇವಿಸ್ ಕಪ್ ಪಂದ್ಯ ನಡೆಸಲು ಐಟಿಎಫ್ ನಿರ್ಧರಿಸಿದೆ ಎಂದು ಅಖಿಲ ಭಾರತ ಟೆನಿಸ್ ಫೆಡರೇಶನ್ (ಎಐಟಿಎ) ಧೃಡಪಡಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಡೇವಿಸ್ ಕಪ್ ಪಂದ್ಯ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿತ್ತು ಆದರೆ ಭಾರತೀಯ ಒಕ್ಕೂಟದ ಮನವಿಯ ಮೇರೆಗೆ ನವೆಂಬರ್ 29-30ರಂದು ಪಂದ್ಯ ನಡೆಸಲು ನಿರ್ಧರಿಸಲಾಯಿತು.

ಸುಮಿತ್ ನಾಗಲ್ ಮತ್ತು ರಾಮ್‌ಕುಮಾರ್ ರಾಮನಾಥನ್ ನೇತೃತ್ವದ ಡೇವಿಸ್ ಕಪ್‌ನಲ್ಲಿ ಭಾರತ ತಂಡ ಸಿಂಗಲ್ಸ್ ನಲ್ಲಿ ಹಾಗೂ ಲಿಯಾಂಡರ್ ಪೇಸ್ ಮತ್ತು ಜೀವನ್ ನೆಡುಚೆಜಿಯಾನ್ ಡಬಲ್ಸ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
ಭಾರತ ವಿರುದ್ಧದ ಡೇವಿಸ್ ಕಪ್ ಪಂದ್ಯದಿಂದ ಪಾಕಿಸ್ತಾನದ ಐಸಮ್ ಹಿಂದಕ್ಕೆ

ಪಾಕಿಸ್ತಾನ ಟೆನಿಸ್ ತಾರೆ ಐಸಮ್-ಉಲ್-ಹಕ್ ಖುರೇಷಿ ಅವರು ಭಾರತ ವಿರುದ್ಧದ ಡೇವಿಸ್ ಕಪ್ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಭಾರತೀಯ ಆಟಗಾರರ ಭದ್ರತಾ ವ್ಯವಸ್ಥೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ (ಐಟಿಎಫ್) ಪಾಕಿಸ್ತಾನ್ ದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ತಟಸ್ಥ ಸ್ಥಳಕ್ಕೆ ವರ್ಗಾಯಿಸಿತು.

“ಐಟಿಎಫ್ ನಿರ್ಧಾರವು ವಿಷಾದನೀಯ ಎಂದು ಐಸಮ್ ತಿಳಿಸಿದ್ದಾರೆ. ವಿಶ್ವದ ಸಂಸ್ಥೆ ಭಾರತೀಯ ಆಟಗಾರರ ಪ್ರಭಾವಕ್ಕೆ ಒಳಪಟ್ಟಿದೆ ಮತ್ತು ಡೇವಿಸ್ ಕಪ್ ಪಂದ್ಯವನ್ನು ಇಲ್ಲಿಂದ ಬೇರೆ ಕಡೆಗೆ ವರ್ಗಾಯಿಸಲು ಮುಂದಾಯಿತು ಬೇಸರ ವ್ಯಕ್ತಪಡಿಸಿದ್ದಾರೆ.  ಖುರೇಷಿ, ಪಾಕಿಸ್ತಾನ ಟೆನಿಸ್ ಅಸೋಸಿಯೇಶನ್ ಅಧ್ಯಕ್ಷ ಸಲೀಮ್ ಸೈಫುಲ್ಲಾ ಅವರಿಗೆ ಬರೆದ ಪತ್ರದಲ್ಲಿ, “ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ಮತ್ತು ಐಟಿಎಫ್ ವರ್ತನೆ ಪಾಕಿಸ್ತಾನ ಟೆನಿಸ್ ಅಸೋಸಿಯೇಷನ್ ವಿರುದ್ಧವಾಗಿದೆ. ಪಾಕಿಸ್ತಾನದಲ್ಲಿ ಭಾರತ ತಂಡಕ್ಕೆ ಯಾವುದೇ ಬೆದರಿಕೆ ಇಲ್ಲ. ಪಾಕಿಸ್ತಾನದ ಕರ್ತಾರ್‌ಪುರ, ನಾನಕಾ ಸಾಹಿಬ್ ಮತ್ತು ಟ್ಯಾಕ್ಸಿಲಾದಲ್ಲಿ ನೂರಾರು ಭಾರತೀಯರು ಪೂಜೆಗೆ ಬರುತ್ತಾರೆ ಮತ್ತು ಅವರ ವಿರುದ್ಧ ಒಂದೇ ಒಂದು ಹಿಂಸಾತ್ಮಕ ಘಟನೆ ನಡೆದಿಲ್ಲ”

ರೋಹನ್ ಬೋಪಣ್ಣ ಅವರೊಂದಿಗೆ ದೀರ್ಘಕಾಲ ಆಡುತ್ತಿರುವ ಐಸಮ್, ಭಾರತೀಯ ಆಟಗಾರರು ಮತ್ತು ಅಧಿಕಾರಿಗಳನ್ನು ಟೀಕಿಸಿದ್ದಾರೆ ಅಲ್ಲದೆ. “ಅವರು ನಮ್ಮ ಭದ್ರತಾ ಸಿಬ್ಬಂದಿಯನ್ನು ಅವಮಾನಿಸಬಾರದು, ಅವರು ಭಾರತೀಯ ಟೆನಿಸ್ ತಂಡದ ಕೆಲವೇ ಸದಸ್ಯರಿಗೆ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

Leave a Comment