ನೂತನ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ

ಕೊಳ್ಳೇಗಾಲ.ಮೇ.19- ಜಿಲ್ಲಾ ಯುವ ಕಾಂಗ್ರೇಸ್‍ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚೇತನ್‍ದೊರೈರಾಜ್ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯುವಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ಅಜೀಜ್ ಅವರನ್ನು ಯುವಕಾಂಗ್ರೇಸ್ ಕಾರ್ಯಕರ್ತರಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪಟ್ಟಣಕ್ಕೆ ಆಗಮಿಸಿದ್ದ ಅವರನ್ನು ಯುವಕಾಂಗ್ರೇಸ್ ಕಾರ್ಯಕರ್ತರು ಹಾರ ಹಾಕಿ, ಶಾಲುಹೊದಿಸಿ ಹಾಗೂ ಪಟಾಕಿ ಸಿಡಿಸಿ, ಡೋಲು, ತಮಟೆಯೊಂದಿಗೆ ಮೂಲಕ ಸಂಭ್ರಮಾಚರಣೆ ನಡೆಸಿದರು.
ಅಚ್ಗಾಲ್ ವೃತ್ತದಿಂದ, ಜಯ ಕಂಪ್ಯೂಟರ್ ಸೆಂಟರ್ ರಸ್ತೆ, ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆ, ಚಿನ್ನಬೆಳ್ಳಿ ರಸ್ತೆ, ಮಸೀದಿ ವೃತದಲ್ಲಿ ಮೆರವಣಿಗೆ ನಡೆಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ, ನಮ್ಮ ತಂದೆಯ ನಂತರ ಕಳೆದ 25 ವರ್ಷಗಳ ನಂತರ ಕೊಳ್ಳೇಗಾಲ ಭಾಗಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ದೊರೆತ್ತಿದೆ. ನಮ್ಮ ಹಾದಿಯಲ್ಲಿ ಅಭಿವೃದ್ಧಿ ಕಾರ್ಯಗಳ ಜಾತ್ಯಾತೀತವಾಗಿ ಬಗ್ಗೆ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ನಮ್ಮ ಜಿಲ್ಲೆಯ ಸಂಸದರು ಹಾಗೂ ನನ್ನ ನೆಚ್ಚಿನ ಗುರುಗಳಾದ ಆರ್.ಧುೃವನಾರಾಯಣ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರ ಸಹಕಾರದಿಂದ ನಾನು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟನೆ ಮಾಡುವುದಾಗಿ ತಿಳಿಸಿದರು.
ಮೆರವಣಿಗೆಯಲ್ಲಿ ಕಾಂಗ್ರೇಸ್ ಮುಖಂಡರಾದ ಮಹಮ್ಮದ್ ಮತೀನ್, ಯುವಕಾಂಗ್ರೇಸ್ ಶಿವಶಂಕರ್, ಎನ್.ಎಸ್.ಯು.ಐ ವಿನಯ್, ನಿತಿನ್ ಸೇರಿದಂತೆ ಯುವಕಾಂಗ್ರೇಸ್‍ನ ಕಾರ್ಯಕರ್ತರು ಹಾಜರಿದ್ದರು.

Leave a Comment