ನೀರೆಯರ ಸೀರೆ ಸವಾಲು

ಬೆಂಗಳೂರು, ಏ. ೩- ಇಡೀ ವಿಶ್ವಕ್ಕೆ ಕೊರೊನಾ ವೈರಾಣು ಸವಾಲು ಒಡ್ಡಿದ್ದರೆ ಭಾರತೀಯ ನೀರೆಯರು ತಮ್ಮ ಸಖಿಯರೊಂದಿಗೆ ಸೀರೆ ಸವಾಲು ವೊಡ್ಡುತ್ತಿದ್ದಾರೆ..!
ಹೀಗೊಂದು ಟ್ರೆಂಡಿಂಗ್ ವಾಟ್ಸಾಪ್, ಫೇಸ್ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿದೆ.

saree2
ಲಾಕ್‌ಡೌನ್‌ನಿಂದಾಗಿ ಕಳೆದ 10 ದಿನಗಳಿಂದ “ಗೃಹಬಂಧಿ”ಯಾಗಿರುವ ನೀರೆಯರು ವಾಟ್ಸಾಪ್ ಸ್ಟೇಟಸ್‌ನಲ್ಲಿ ತಮ್ಮ ಸಖಿಯರೊಂದಿಗೆ ಸೀರೆ ಸವಾಲನ್ನು ವೊಡ್ಡುತ್ತಿದ್ದಾರೆ.
ಯುವತಿಯರು ಹಾಗೂ ಮಹಿಳೆಯರು ಸೀರೆ ತೊಟ್ಟ ತಮ್ಮ ಭಾವಚಿತ್ರಗಳನ್ನು ವಾಟ್ಸಾಪ್‌ ಸಂಪರ್ಕದಲ್ಲಿರುವ ಸ್ನೇಹಿತೆಯರೊಂದಿಗೆ ಪರಸ್ಪರ ಹಂಚಿಕೊಂಡು ಭಾವಚಿತ್ರ ಸಮೇತ ಯಾರು ಹೆಚ್ಚು ಸುಂದರವಾಗಿ ಕಾಣುತ್ತಾರೆ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ವಾಟ್ಸಾಪ್ ಸ್ಟೇಟಸ್‌ನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಸ್ಟೇಟಸ್‌ಗಳಲ್ಲಿ ತಮ್ಮ ಸಖಿಯರೊಂದಿಗೆ ಸೌಂದರ್ಯದ ಸವಾಲು ಹಾಕುತ್ತಾರೆ.

 

s1
ಹೀಗೆ ಮಹಿಳೆಯರು ನಿತ್ಯ ತಮ್ಮ ಹತ್ತಾರು ಸೀರೆಯುಟ್ಟ ಭಾವಚಿತ್ರಗಳ ಸ್ಟೇಟಸ್ ಅಪ್‌ಲೋಡ್‌ ಮಾಡುತ್ತಿದ್ದು, ಅವರಿಂದ ಪ್ರತಿಕ್ರಿಯೆಗಾಗಿ ಕಾಯುವುದೇ ದಿನದ ಕಾಯಕವಾಗಿದೆ. ‌
ಲಾಕ್‌‌ಡೌನ್‌ನಿಂದಾಗಿ ಮನೆಯಲ್ಲೇ ಕಾಲ ಹರಣ ಮಾಡಲು ಮಹಿಳೆಯರು ಈ ಟ್ರೆಂಡಿಂಗ್ ಹುಟ್ಟು ಹಾಕಿದ್ದು, ಮಹಿಳಾ ಸ್ನೇಹಿತರಿರುವ ಪುರುಷರಿಗೆ ಇದೊಂದು ರೀತಿಯ ರಸದೌತಣ ನೀಡುತ್ತಿದೆ.
ಬೇಸರ ಕಳೆಯಲು ಈ ಟ್ರೆಂಡಿಂಗ್ ಉತ್ತಮ ಮಾರ್ಗೋಪಾಯವಾಗಿದ್ದರೂ ಕೆಲ ಪಡ್ಡೆಗಳು ಇದರ ದುರುಪಯೋಗವನ್ನು ಪಡೆದುಕೊಳ್ಳುವ ಆತಂಕವೂ ಇದೆ.
ಸೀರೆ ಜತೆಗೆ ಸಾಂಪ್ರದಾಯಿಕ ಉಡುಪುಗಳ ಪ್ರದರ್ಶನಕ್ಕೂ ಅವಕಾಶ ನೀಡುತ್ತಾರೆ. ಇಂತಹ ಸ್ಟೇಟಸ್‌ಗಳಿಗೆ ಪ್ರತಿಕ್ರಿಯಿಸುತ್ತಿರುವ ಪಡ್ಡೆಗಳು ಪಾಶ್ಚಾತ್ಯ ಉಡುಪುಗಳ ಪ್ರದರ್ಶನದ ಸವಾಲುವೊಡ್ಡುವಂತೆ ಸಲಹೆ ನೀಡುತ್ತಿದ್ದಾರೆ.

Leave a Comment