ನೀರು ಯಾವಾಗ ಕುಡಿಯಬೇಕು ಊಟಕ್ಕೆ ಮೊದಲೇ, ನಂತರವೇ

ನೀರು ದೇಹಕ್ಕೆ ಹೆಚ್ಚು ಸೇರಿದಷ್ಟು ಒಳ್ಳೆಯದು. ಅತಿ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವರಿಗೆ ಊಟಕ್ಕೆ ಮೊದಲು, ಇನ್ನು ಕೆಲವರಿಗೆ ಊಟದ ನಂತರ ನೀರು ಕುಡಿಯುವ ಅಭ್ಯಾಸ ಇರುತ್ತದೆ.
ಈ ವಿಚಾರದಲ್ಲಿ ಒಬ್ಬೊಬ್ಬರದು ಒಂದೊಂದು ವಾದ. ಯಾವಾಗ ನೀರು ಕುಡಿಯಬೇಕು ಎಂಬುದೇ ಗೊಂದಲದ ವಿಚಾರ. ತಜ್ಞವೈದ್ಯರ ಪ್ರಕಾರ ಊಟ ಮಾಡುವ ಕೆಲ ಸೆಕೆಂಡ್‌ಗಳ ಮೊದಲು ನೀರು ಕುಡಿಯುವುದು ಒಳ್ಳೆಯದಲ್ಲ, ಇದರಿಂದ ನಮ್ಮ ಜೀರ್ಣಕ್ರಿಯೆ ನಿಗದಿತ ಸಮಯಕ್ಕಿಂತ ಬೇಗನೇ ಆಗುತ್ತದೆ. ಈ ಕಾರಣದಿಂದ ಅಸಿಡಿಟಿ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ತಜ್ಞರು.
ಅದೇ ರೀತಿ ಊಟದ ಜತೆಗೆ ನೀರು ಸೇವಿಸುವುದರಿಂದಲೂ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಕಾರಣ ಊಟದ ಜತೆಗೆ ನೀರು ಕುಡಿಯುವುದರಿಂದ ಜೊಲ್ಲು ರಸ ಬಿಡುಗಡೆಗೆ ಅಡ್ಡಿಯಾಗುತ್ತದೆ ಎಂಬುದು ತಜ್ಞರ ಕಿವಿಮಾತು.
ಹಾಗಿದ್ದರೆ ಯಾವಾಗ ನೀರು ಕುಡಿಯಬೇಕು? ಎಂದು ಗೊಂದಲವಾಗುತ್ತಿದೆಯೇ. ಗೊಂದಲ ಬೇಡ ಊಟವಾದ ಮೇಲೆ ಜೀರ್ಣಕ್ರಿಯೆ ಪೂರ್ಣಗೊಳ್ಳಲು 30 ನಿಮಿಷ ಬೇಕು ಇದಾದ ಮೇಲೆ ನೀರು ಕುಡಿದರೆ ಒಳ್ಳೆಯದು. ಜೀರ್ಣಕ್ರಿಯೆಗೂ ಯಾವುದೇ ಸಮಸ್ಯೆ ಇಲ್ಲ ಎಂಬುದು ತಜ್ಞರ ಅಭಿಮತ. ಹಾಗಾಗಿ ಊಟಕ್ಕೆ ಮೊದಲು ನೀರು ಕುಡಿಯುವುದು ನಿಷಿದ್ಧ. ಜತೆಗೆ ಊಟವಾದ ನಂತರ ಅರ್ಧ ಗಂಟೆ ಬಿಟ್ಟು ನೀರು ಕುಡಿಯುವುದು ಸೂಕ್ತ.

Leave a Comment