ನೀರು ಕದಿಯುವುದು ಹೀಗೇನಾ

ಬಳ್ಳಾರಿ, ಸೆ.7: ತುಂಗಭದ್ರಾ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಯ ನೀರನ್ನು ಅನಧಿಕೃತ ಸಾಗುವಳಿ ಮಾಡುವ ನೀರನ್ನು ಹೇಗೆ ಕದಿಯುತ್ತಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ರೈತರು ನಾನ್ ಆಯಕಟ್ಟಿನ ಜಮೀನುಗಳಿಗೆ ಎಲ್.ಎಲ್.ಸಿ ಹಾಗೂ ಹೆಚ್.ಎಲ್.ಸಿ ಕಾಲುವೆಗಳಿಗೆ ದಂಡೆ ಮೇಲೆ ಪೈಪ್ ಗಳನ್ನು ಹಾಕಿ ಆಮೂಲಕ ನೀರು ಎಳೆದುಕೊಂಡು ತಮ್ಮ ಜಮೀನುಗಳಿಗೆ ನೀರನ್ನು ಹಾಯಿಸಿಕೊಂಡು ಬೆಳೆ ಬೆಳೆಯುತ್ತಾರೆ.
ಕಾಲುವೆ ಮೇಲೆ ಪೈಪ್ ಹಾಕಿದರೆ ಅದನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವುದಲ್ಲದೆ ಪೈಪ್ ಹಾಕಿದವರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ತುಂಗಭದ್ರ ಮಂಡಳಿಯ ಅಧಿಕಾರಿಗಳು.

ಅದಕ್ಕಾಗಿ ಹೆದರಿದ ರೈತರು ಪಱ್ಯಾಯ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಎಲ್ಲೆಲ್ಲೆ ಕಾಲುವೆಗಳಿಗೆ ಮಳೆ ನೀರು ಆ ಕಡೆಯಿಂದ ಈ ಕಡೆ ಹೋಗಲು ಅಕ್ವಡೆಕ್ವಗೆ ನಿರ್ಮಿಸಿದ್ದಾರೆ. ಅವುಗಳಿಗೆ ರೈತರು ಈಗಿನ ಆಧುನಿಕ ಯಂತ್ರಗಳ ಮೂಲಕ ರಂಧ್ರ ಕೊರೆದುತ ನೀರು ಸೋರುವಂತೆ ಮಾಡಿಕೊಂಡಿದ್ದಾರೆ. ಹೀಗೆ ಸೋರುವ ನೀರು ಹಳ್ಳದ ಮೂಲಕ ಹರಿದು ಬಂದಾಗ ಅವರನ್ನು ಬಳಸಿಕೊಂಡು ತರಕಾರಿ ಮೊದಲಾದ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಬಳ್ಳಾರಿ ನಗರದಿಂದ ಹೊನ್ನಳ್ಳಿಗೆ ಹೋಗುವ ದಾರಿಯಲ್ಲಿ ಬರುವ ಹೆಚ್.ಎಲ್.ಸಿ ಕಾಲುವೆಯ ಅಕ್ವಡೆಕ್ವಗೆ ಹೀಗೆ ರಂಧ್ರ ಮಾಡಿ ನೀರನ್ನು ಕದಿಯಲಾಗುತ್ತಿದೆ.

ಈ ರೀತಿ ರಂಧ್ರ ಮಾಡಿರುವುದು ಮಾತ್ರ ಅಲ್ಲದೇ ಕಾಲುವೆಯಲ್ಲಿ ಬರುವ ಅನೇಕ ಅಕ್ವಡೆಕ್ವಗಳಿಗೆ ಇದೇ ರೀತಿ ಮಾಡಿದ್ದಾರಂತೆ.
ಕಾಲುವೆಯಲ್ಲಿ ನೀರು ಇರುವುದರಿಂದ ಇದನ್ನು ಮುಚ್ಚಲಾಗದೆಂದು ಅಧಿಕಾರಿಗಳು ಹೇಳುತ್ತಾರೆ. ಇಂತಹ ಐಡಿಯಾ ರೈತರಿಗೆ ಅಧಿಕಾರಿಗಳೇ ಕೊಟ್ಟು ರೈತರಿಂದ ಲಾಭಪಡೆಯುತ್ತಾರೆಂದು ಆರೋಪ ಇದೆ.

Leave a Comment