ನೀರಿನ ಮಹತ್ವ ಅರ್ಥಮಾಡಿಕೊಳ್ಳಬೇಕು

ಮೇಲುಕೋಟೆ.ಜ.14. ಮೇಲುಕೋಟೆ ಸ್ಮಾರಕಗಳ ಜೊತೆಗೆ ಕಾಡು ಮತ್ತು ಪರಿಸರಕ್ಕೆ ಹೆಸರಾದ ಕ್ಷೇತ್ರವಾಗಿತ್ತು  ಆದರೆ ನಮ್ಮ ಕಾಳಜಿಕೊರತೆಯಿಂದ ಮರಗಳು ನಾಶವಾಗುತ್ತಿವೆ ಈ ಕಾರಣ ಮರಗಿಡಗಳನ್ನು ಬೆಳೆಸುವ ಕಾರ್ಯ ಆಗಬೇಕು ಎಂದು ಬೆಂಗಳೂರಿನ  ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ  ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ರಾಮರಾಜು ತಿಳಿಸಿದರು  ಅವರು ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಆವರಣದಲ್ಲಿ ಡಿ.ಎಸ್.ಸಿ.ಇ ಸಿವಿಲ್ ಇಂಜಿನಿಯರಿಂಗ್‍ನ ವಿಭಾಗದ ಸಮುದಾಯ ಸೇವಾ ಸಮಿತಿ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಹಮ್ಮಿಕೊಂಡಿದ್ದ  ನೀರು ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆ ಕುರಿತಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಳೆ ನೀರು ಸಂಗ್ರಹ ತಂತ್ರಜ್ಞಾನವನ್ನು ಮೇಲುಕೋಟೆಯಲ್ಲಿ ಕಲ್ಯಾಣಿಗಳ ನಿರ್ಮಾಣದ ಮೂಲಕ ಶತ-ಶತಮಾನಗಳ ಹಿಂದೆಯೇ ಪೂರ್ವಿಕರು ನಮಗೆ ತೋರಿಸಿಕೊಟ್ಟಿದ್ದು  ವೈಜ್ಞಾನಿಕ ಯುಗದಲ್ಲಿರುವ ನಾವು ನೀರಿನ ಮಹತ್ವ ಅರ್ಥಮಾಡಿಕೊಳ್ಳಬೇಕು ಕಾಡಿನ ಕೊರತೆಯಿಂದಾಗಿ ಇಡೀ ಪರಿಸರದಲ್ಲಿ ತಾಪಮಾನ ಹೆಚ್ಚಿ ಮಳೆಯ ಕೊರತೆ ಕಾಡುತ್ತಿದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ  ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ  ಪ್ರಾಂಶುಪಾಲ ಡಾ.ಪಿ ಎಸ್ ಪ್ರಕಾಶ್ ಮಾತನಾಡಿ   ಇಂದು ಮಳೆನೀರಿನ ಸಂಗ್ರಹದ  ಹಾಗೂ ಜಲಮೂಲಗಳನ್ನು  ಸಂರಕ್ಷಿಸಿ ಸ್ವಚ್ಚತೆ ಕಾಪಾಡಲೇಬೇಕಾದ ಅಗತ್ಯವಿದೆ.   ನೀರಿನ ಮೂಲಗಳನ್ನು ಹಾಗೂ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಾವು ನಿರ್ವಹಿಸದಿದ್ದರೆ ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.  ಕಾಡಿನ ಪ್ರಮಾಣ ಶೇಕಡಾ 15 ಕ್ಕೆ ಇಳಿದಕಾರಣ ಜಾಗತಿಕ ತಾಪಮಾನ ಎದುರಿಸುವಂತಾಗಿದೆ ಇದಕ್ಕೆ ಮರಗಿಡ ಬೆಳೆಸುವುದೇ ಪರಿಹಾರ ಹೀಗಾಗಿ ವಿದ್ಯಾರ್ಥಿಗಳು  ಸಮುದಾಯದಲ್ಲಿ ಜಾಗೃತಿ ಮೂಡಬೇಕಿದೆ. ಪ್ರಧಾನಮಂತ್ರಿ ಮೋದಿ ಸ್ವಚ್ಛಭಾರತ  ಕಾರ್ಯಕ್ರಮ ರೂಪಿಸಿ ಇಡೀ ರಾಷ್ಟ್ರದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ  ಹೀಗಾಗಿ  ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ  ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಕುದುರೆಮುಖ ಐರನ್ ಮತ್ತು ಓಲ್ ಕಂಪನಿಯ ಜನರಲ್ ಮ್ಯಾನೇಜರ್ ರಾಜೇಂದ್ರ ಮಾತನಾಡಿ   ಮಾನವ ಇಡೀ ಪರಿಸರವನ್ನು ನಾಶಪಡಿಸುತ್ತಿದ್ದಾನೆ.  ಕುಡಿಯುವ ನೀರು ಕಲುಷಿತವಾದರೆ ಹಲವು ರೀತಿಯ ರೀತಿಯ ಮಾರಣಾಂತಿಕ ಖಾಯಿಲೆಗೆ ತುತ್ತಾಗಬೇಕಾಗುತ್ತದೆ. ಬಹುಪಾಲ ಸಾಂಕ್ರಾಂತಿಕ ರೋಗಗಳು ಕುಡಿಯುವ ನೀರು ಹಾಗೂ ನೀರಿನ ಮೂಲಗಳ ಅಶುಚಿತ್ವದಿಂದಲೇ ಹರಡುತ್ತವೆ ಹೀಗಾಗಿ ನೀರಿನ ಶುದ್ಧತೆಗೆ ಆದ್ಯತೆ ನೀಡಬೇಕು ಜೊತೆಗೆ ಮನೆ, ಶಾಲೆ, ಗ್ರಾಮಗಳ ನೈರ್ಮಲ್ಯಕಾಪಾಡಲು ಶ್ರಮಿಸಬೇಕು  ಎಂದರು.
ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ  ದಯಾನಂದ ಸಾಗರ ಕಾಲೇಜಿನ ಕಾರ್ಯದರ್ಶಿ ಗಾಳಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮೇಲುಕೋಟೆ ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್  ಕಾರ್ಯದರ್ಶಿ ಶೈಲಜಾ,   ಎಸ್.ಡಿ.ಎಂ.ಸಿ ಅದ್ಯಕ್ಷ ದೇವರಾಜು,  ಪ್ರಭಾರಿ ಮುಖ್ಯಶಿಕ್ಷಕ ಸಂತಾನರಾಮನ್ ,  ಶಿಕ್ಷಕರಾದ ಜಯಂತಿ, ಮುತ್ತುರಾಜ್,  ದೈಹಿಕ ಶಿಕ್ಷಕ ಇಮ್ರಾನ್. ಶಿಭಿರಾಧಿಕಾರಿಗಳಾದ ಪ್ರೊ.. ಜಿ.ಪಿ. ಶಿವಶಂಕರ್, ಪ್ರೊ..ಸಂಜೀವ್ ಭಾಗವಹಿಸಿದ್ದರು. ಶಾಲೆಗೆ ಹತ್ತುಸಾವಿರ ಮೌಲ್ಯದ ಕುಡಿಯುವ ನೀರಿನ ಶುದ್ಧಿಕರಣ  ಕೊಡುಗೆ ನೀಡಲಾಯಿತು.
ಇದೇ ವೇಳೆ  ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಜಾಥ ಮಾಡಿದ  200 ವಿದ್ಯಾರ್ಥಿಗಳು 12 ತಂಡಗಳಲ್ಲಿ ಪೌರಕಾರ್ಮಿಕರ ಜೊತೆ ಮೇಲುಕೋಟೆಯ  ವಿವಿಧ ಭಾಗಗಳಿಗೆ ತೆರಳಿ ಸ್ವಚ್ಚತೆ ಮಾಡಿದರು. ಉತ್ತಮವಾಗಿ ಸ್ವಚ್ಚತಾಕಾರ್ಯ ಮಾಡಿದ  ಡಾ.ನೀತುಅರಸ್ ಮತ್ತು ಪ್ರೊ. ಚಂದ್ರಶೇಖರ್ ತಂಡಕ್ಕೆ ಪ್ರಥಮ ಪ್ರೊ. ನಿತಿನ್‍ತಂಡ ಎರಡನೇ ಸ್ಥಾನ ಪಡೆದ ವಿದ್ಯಾರ್ಥಿ ತಂಡಗಳಿಗೆ ತಲಾ ಮೂರುಸಾವಿರ ನಗದು ಬಹುಮಾನ ಪ್ರಶಸ್ತಿ ಸಹ ವಿತರಿಸಲಾಯಿತು.

Leave a Comment