ನೀರಿಗೆ ಬಿದ್ದು ಬಾಲಕ ಸಾವು

ಗುಬ್ಬಿ, ಜೂ. ೧೮- ಕೆರೆಯಲ್ಲಿ ಎಮ್ಮೆ ಮೈ ತೊಳೆಯಲು ಹೋಗಿದ್ದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಎಸ್.ಕೊಡಗಿಹಳ್ಳಿಯಲ್ಲಿ ನಡೆದಿದೆ.

ವಿಜಯಕುಮಾರ್ (15) ಮೃತಪಟ್ಟಿರುವ ದುರ್ದೈವಿ ಬಾಲಕ. ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆರೆಯಲ್ಲಿ ಎಮ್ಮೆಗಳ ಮೈ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸಂಜೆಯಾದರೂ ಮಗ ಬಾರದೆ ಇದ್ದುದ್ದನ್ನು ಗಮನಿಸಿದ ಪೋಷಕರು ಹುಡುಕಾಡಿದರೂ ಸಿಕ್ಕಿರಲಿಲ್ಲ. ಕೆರೆಯಲ್ಲಿ ಬಾಲಕನ ದೇಹ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಪೋಷಕರಿಗೆ ವಿಷಯ ತಿಳಿದಿದೆ.
ಸ್ಥಳಕ್ಕೆ ತಹಶೀಲ್ದಾರ್ ಎಂ. ಮಮತಾ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂಬಂಧ ಸಿ.ಎಸ್. ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment