ನೀನು ನನಗೆ ಸದಾ ಹೊಸತು’ ‘ಆದಿಲಕ್ಷ್ಮಿ’ ಅಭಿನಯಕ್ಕೆ ಯಶ್ ಫಿದಾ

ಬೆಂಗಳೂರು, ಜು 19 – ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ‘ಆದಿಲಕ್ಷ್ಮಿ ಪುರಾಣ’ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ

ರಾಧಿಕಾ ಪಂಡಿತ್ ವಿವಾಹದ ಬಳಿಕ ಒಪ್ಪಿಕೊಂಡಿದ್ದ ಚಿತ್ರ ಇದಾಗಿದ್ದು, ಪ್ರೇಕ್ಷಕರಿಗೂ ಮುನ್ನ ತಮ್ಮ ಪತಿ, ರಾಕ್ ಸ್ಟಾರ್ ಯಶ್ ಅವರ ಮೆಚ್ಚುಗೆ ಪಡೆದುಕೊಂಡಿದ್ದಾರೆ  ‘ಪ್ರತಿ ಬಾರಿ ತೆರೆಯ ಮೇಲೆ ನಿನ್ನನ್ನು ನೋಡಿದಾಗಲೆಲ್ಲ ಹೊಸತು ಎನಿಸುತ್ತದೆ ಹೊಸದಾಗಿ ಪ್ರೀತಿ ಮೂಡುತ್ತದೆ” ಎಂದು ಯಶ್ ಟ್ವೀಟ್ ಮಾಡಿದ್ದಾರೆ

ಅಲ್ಲದೆ, “ನಾಯಕ ನಟ ನಿರೂಪ್ ಭಂಡಾರಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ನಿರ್ದೇಶಕಿ ಪ್ರಿಯಾ, ಛಾಯಾಗ್ರಾಹಕಿ ಪ್ರೀತಾ ಜಯರಾಮ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ತಂಡಕ್ಕೆ ಯಶಸ್ಸು ಸಿಗಲಿ” ಎಂದು ಹಾರೈಸಿದ್ದಾರೆ

ರಾಧಿಕಾ ಪಂಡಿತ್ ಪ್ರತಿಭಾವಂತೆ  ಮದುವೆಯಾದ ನಂತರ ನಟಿಸಬಾರದು ಎಂಬ ಯಾವ ಷರತ್ತನ್ನೂ ವಿಧಿಸಿಲ್ಲ  ಯಾವುದೇ ಕಾರಣಕ್ಕೂ ಆಕೆಯಲ್ಲಿನ ಪ್ರತಿಭೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಯಶ್ ಹೇಳಿದ್ದರು.

ರಾಕ್ ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಆದಿಲಕ್ಷ್ಮಿ ಪುರಾಣ’ ವಿ ಪ್ರಿಯಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.ಮ್ಯ ಜಗನ್ಮೂರ್ತಿ, ಜೋ ಸೈಮನ್, ಯಶ್ವಂತ್ ಶೆಟ್ಟಿ, ಮತ್ತು ಭರತ್ ಕಲ್ಯಾಣ್ ಸಹ ಅಭಿನಯಿಸಿದ್ದು , ಅನೂಪ್ ಭಂಡಾರಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

Leave a Comment