ನೀತಿ ಸಂಹಿತೆ ಉಲ್ಲಂಘನೆ- 97ಪ್ರಕರಣ ಇತ್ಯರ್ಥ

ಮೈಸೂರು. ಏ.16- ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ನಂತಕ ಜಿಲ್ಲಾದ್ಯಂತ 134 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 97ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಅವರು ಇಂದು ತಮ್ಮ ಕಛೇರಿಯ ಸಭಾಂಗಣದಲ್ಲಿ ತರೆಯಲಾಗಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮೈಸೂರು ನಗರದಲ್ಲಿ ಚುನಾಮಣಾ ಸಂಹಿತ ಜಾರಿಯಾದ ನಂತರ ಯಾವುದೇ ಪ್ರಕರಣ ದಾಖಲಾಗಿರುವುಜಿಲ್ಲ. ಇದುವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ 7.48ಲಕ್ಷರೂ.ನಗದು, ಎರಡು ಬೋರ್ ವೆಲ್ ಲಾರಿ, ಒಂದು ಮೈಕ್ ಸೆಟ್, ನಾಲ್ಕು ವಾಹನ, ಒಂದು ಪ್ರಚಾರ ವಾಹನ, ಒಂದು ಹಾಟ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ಕೆ.ಆರ್.ನಗರದಲ್ಲಿ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಟಿ ಷರ್ಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯ ವಿವಿದೇಡೆ 386 ರೈಡ್ ಗಳು ನಡೆದಿದ್ದು, 69ಮಂದಿಯನ್ನು ಬಂಧಿಸಲಾಗಿದೆ. 3.09ಲಕ್ಷರೂ.ಮೌಲ್ಯದ 1118ಲೀಟರ್ ಲಿಕ್ಕರ್, ಒಂದು ಕೆ.ಜಿ.ಗೋಲ್ಡ್, 2ಕಾರು, 12 ದ್ವಿಚಕ್ರವಾಹನಗಳು, 1ತ್ರಿಚಕ್ರವಾಹನ ಸೇರಿದಂತೆ 15 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 8.28ಕೋ.ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Leave a Comment