ನಿಸ್ವಾರ್ಥತೆಯಿಂದ ಮಾಡಿದ ಸೇವೆ ಶ್ರೇಷ್ಠವಾದದು

ದಾವಣಗೆರೆ.ಜು.14; ನಿಸ್ವಾರ್ಥತೆಯಿಂದ ಮಾಡಿದ ಸೇವೆ ಶ್ರೇಷ್ಠವಾದದು ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗೌರ್ನರ್ ಮೋನಿಕಾ ಸಾವಂತ್ ಹೇಳಿದರು.
ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್‍ನ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಷ್ಠಾಪನಾ ಅಧಿಕಾರಿಗಳಾಗಿ ಮಾತನಾಡಿದ ಅವರು, ಯಾವುದೇ ಆಸೆ-ಆಕಾಂಕ್ಷೆಗಳಿಲ್ಲದೆ ಮಾಡಿದ ಸೇವೆ ಶ್ರೇಷ್ಠವಾಗಿ ಎಲ್ಲರಿಗೂ ತಲುಪಿ, ಶ್ರೇಷ್ಠವೆನಿಸುತ್ತದೆ. ಬಲಗೈಯಿಂದ ಮಾಡಿದ ದಾನ ಎಡಗೈಗೆ ತಿಳಿಯಬಾರದು, ಎಡಗೈಯಿಂದ ಮಾಡಿದ ದಾನ ಬಲಗೈಗೆ ತಿಳಿಯಬಾರದು ಎಂದು ಹಿರಿಯರು ಹೇಳುತ್ತಾರೆ. ನಾನು ಮಾಡಿದೆ, ನಾನೇ ಮಾಡಿದೆ ಎಂದು ಹೇಳಿಕೊಳ್ಳಬಾರದು. ವಿಶಾಲ ಮನೋಭಾನೆಯಿಂದ ಸೇವೆ ಮಾಡಿದಾಗ, ನಮಗೆ ತೃಪ್ತಿ ದೊರೆಯುತ್ತದೆ. ನಮ್ಮಿಂದ ಸೇವೆ ಪಡೆದವರಿಗೂ ಒಳ್ಳೆಯದಾಗುತ್ತದೆ.
ನೂತನವಾಗಿ ಅಧಿಕಾರ ಸ್ವೀಕರಿಸುತ್ತಿರುವ ಪದಾಧಿಕಾರಿಗಳು, ಹಿಂದಿನ ಪದಾಧಿಕಾರಿಗಳು ಪ್ರಾರಂಭಿಸಿದ ಉತ್ತಮ ಕಾರ್ಯಗಳನ್ನು ಪ್ರೋತ್ಸಾಯಿಸುವ ಜೊತೆಗೆ, ಹೊಸ ಯೋಜನೆಗಳನ್ನು ಹಾಕಿಕೊಂಡು ಮುನ್ನಡೆಯಬೇಕು. ಸಮಾಜದಲ್ಲಿ ಬಡವರು, ವೃದ್ಧರು, ಅಶಕ್ತರು ಸಾಕಷ್ಟು ಕಂಡು ಬರುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ, ರಕ್ತದಾನ, ನೀರುದ್ಯೋಗ ನಿವಾರಣೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸೇರಿದಂತೆ ಹಲವಾರು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಮಾದರಿಯ ಕ್ಲಬ್‍ನ್ನಾಗಿ ಮಾಡಬೇಕೆಂದರು.
ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವೈ.ಬಿ.ಸತೀಶ್ ಮಾತನಾಡಿ, ಎಲ್ಲಾ ಪದಾಧಿಕಾರಿಗಳ, ನಿರ್ದೇಶಕರ ಸಲಹೆ, ಸಹಕಾರದೊಂದಿಗೆ ತಮ್ಮ ಅವಧಿಯಲ್ಲಿ ಉತ್ತಮವಾಗಿ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಹಾಗೂ 300 ಸಸಿಗಳನ್ನು ವಿತರಿಸಲಾಯಿತು. ಹಿರಿಯ ಪತ್ರಕರ್ತ ಸುಬಾಷ್ ಬಣಗಾರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್‍ನ ಜಿ.ನಾಗನೂರು, ಡಾ.ಬಿ.ಎಸ್.ನಾಗಪ್ರಕಾಶ್, ಎ.ಆರ್.ಉಜ್ಜಿನಪ್ಪ, ಡಾ.ಜಿ.ಶಿವಲಿಂಗಪ್ಪ, ಡಾ.ಹೆಚ್.ವಿ.ಶಿವಶಂಕರ್, ಹೆಚ್.ಎನ್.ಶಿವಕುಮಾರ್, ಡಾ.ಟಿ.ಬಸವರಾಜ್, ಎಸ್.ಯು. ಆಕಾಶ್ ಪಾಲ್ಗೊಂಡಿದ್ದರು. ಕ್ಲಬ್‍ನ ನೂತನ ಕಾರ್ಯದರ್ಶಿ ಎಸ್.ವೆಂಕಾಚಲಂ, ಖಜಾಂಚಿ ಎಸ್.ಜಿ.ಉಳವಯ್ಯ, ಸಹ ಕಾರ್ಯದರ್ಶಿ ಜೆ.ಓ.ವಿನಾಯಕ, ಉಪಾಧ್ಯಕ್ಷರಾದ ಕೆ.ಎಂ.ವಿಜಯಕುಮಾರ್, ಎಸ್.ಓಂಕಾರಪ್ಪ, ಎಸ್.ಆರ್.ನಾಗಭೂಷಣರಾವ್, ಟಿ.ರಮೆಶ್, ಹೆಚ್.ಎಂ.ನಾಗರಾಜ್, ಬೆಳ್ಳೂಡಿ ಶಿವಕುಮಾರ್, ನೀಲಿ ಉಮೇಶ್, ಆರ್.ಜಿ.ಶ್ರೀನಿವಾಸಮೂರ್ತಿ, ದೇವರಮನಿ ನಾಗರಾಜ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ನಿಕಟಪೂರ್ವಾಧ್ಯಕ್ಷ ಎ.ಬಿ.ಪ್ರತಾಪ್ ಸ್ವಾಗತಿಸಿದರು. ವಾಸುದೇವ ರಾಯ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Comment