ನಿಸಾರ್ ಮನೆಯ ಬಿರಿಯಾನಿ ಪರಿಮಳಕ್ಕೆ ಮನಸೋತ ವರ ನಟ

ಬೆಂಗಳೂರು, ಮೇ 3- ವರ‌ನಟ ಡಾ.ರಾಜಕುಮಾರ್ ಮತ್ತು ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರಿಗೆ ಅವಿನಾಭಾವ ಸಂಬಂಧವಿತ್ತಂತೆ. ಅದಕ್ಕೆ ಕಾರಣ ಏನು ಗೊತ್ತೆ ಬಿರಿಯಾನಿಯಂತೆ.
ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿ ನಿಸಾರ್ ಅಹಮದ್ ಇಹಲೋಕ ತ್ಯಜಿಸಿದ್ದಾರೆ. ಅವರು ರಾಜ್ ಅವರೊಂದಿಗಿನ ಒಡನಾಟ ಕುರಿತು ಇಲ್ಲೊಂದು ವರದಿ. ಡಾ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಡಾ.ರಾಜ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಹಾಗೆಯೇ ರಾಜ್ ಅವರಿಗೆ ನಿಸಾರ್ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರಂತೆ.
ಒಮ್ಮೆ ರಾಜ್ ಅವರನ್ನು ತಮ್ಮ ಮನೆಗೆ ಊಟಕ್ಕೆ ಬರುವಂತೆ ನಿಸಾರ್ ಆಹ್ವಾನಿಸಿದ್ದರು.ಅವರಿಗಾಗಿಯೇ ರುಚಿಕರವಾದ ಬಿರಿಯಾನಿ ಸಿದ್ದವಾಗಿತ್ತು.
ರಾಜ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್. ಹಾಗೇ ರಾಜ್ ಗೆ ನಿಸಾರ್ ಬಗ್ಗೆ ಎಲ್ಲಿಲ್ಲದ ಪ್ರೀತಿ. ಕವಿ, ಕಲಾವಿದರ ಬಗ್ಗೆ ರಾಜ್ ಗೆ ಅಪಾರ ಗೌರವ. ಪರಸ್ಪರ ಇಬ್ಬರಲ್ಲೂ ಸ್ನೇಹಭಾವ ಇತ್ತು. ರಾಜ್ ಕುಮಾರ್ ಅವರನ್ನು ತಮ್ಮ ಮನೆಯ ಊಟಕ್ಕೆ ಒಮ್ಮೆ ಆಹ್ವಾನಿಸಿದರು ನಿಸಾರ್.
ನಿಸಾರ್ ಅವರು ಮಾಡಿಸಿದ್ದ ಬಿರಿಯಾನಿ ಯನ್ನು ರಾಜ್ ಅವರು ಬಾಯಿ ಚಪ್ಪರಿಸಿಕೊಂಡು ಸೇವಿಸಿದ್ದರಂತೆ. ಬಿಸಿ ಬಿಸಿ ಬಿರಿಯಾನಿ ತಿಂದ ಮೇಲೆ ಪತ್ನಿ ಪಾರ್ವತಮ್ಮ ಕೈ ತೊಳೆಯಲು ಹೋದರಂತೆ. ಆದರೆ ರಾಜ್ ಮಾತ್ರ ಅಲ್ಲಿಯೇ ಕುಳಿತುಕೊಂಡು ಬಿಟ್ಟತರಂತೆ. ಇದನ್ನು ಗಮನಿಸಿದವರೆಲ್ಲರಿಗೂ
ಆಶ್ಚರ್ಯವಾಯಿತು.
ಜಾಹೀರಾತುದಾರರುರಾಜ್. ಊಟ ಮುಗಿದ ಬಳಿಕ ಪತ್ನಿ ಪಾರ್ವತಮ್ಮ ಕೈ ತೊಳೆಯಲು ಹೊರಟರು. ಆದರೆ ರಾಜ್ ಮಾತ್ರ ಕೈ ತೊಳೆಯಲು ಹೋಗದೆ ಅಲ್ಲಿಯೇ ಕುಳಿತು ಬಿಟ್ಟರು. ಇದು ಆಶ್ಚರ್ಯಕ್ಕೂ ಕಾರಣವಾಯಿತು.ಕುತೂಹಲ ತಾಳಲಾರದೆ ಪಾರ್ವತಮ್ಮ ರಾಜ್ ಅವರನ್ನು ಕೈ ತೊಳೆಯದೆ ಏಕೆ ಕುಳಿತಿದ್ದೀರಾ ಎಂದು ಪ್ರಶ್ನಿಸಿದ್ದರಂತೆ.ಈ ಬಗ್ಗೆ ರಾಜ್ ಹೇಳುತ್ತಾರೆ ಎಂಬ ಬಗ್ಗೆಯೂ ನಿಸಾರ್ ಅವರಿಗೂ ಕುತೂಹಲ ಉಂಟಾಗಿದೆ. ಊಟದಲ್ಲಿ ವ್ಯತ್ಯಾಸವಾಯಿತೆ ಎಂಬ ಚಿಂತೆ ನಿಸಾರ್ ಅವರನ್ನು ಕಾಡತೊಡಗಿತಂತೆ.
ಎಲ್ಲರಲ್ಲೂ ರಾಜ್ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಎಲ್ಲರಿಗೂ ಕಾತುರವೊ ಕಾತುರ.ಇದನ್ನು ಸೂಕ್ಷ್ಮವಾಗಿ ಗಮನಿಸಿದ ಡಾ.ರಾಜ್ ಸ್ನೇಹಿತ
ನಿಸಾರ್ ಅಹಮದ್ ಅದ್ಬುತ ಬಿರಿಯಾನಿ ಊಟ ಮಾಡಿಸಿದ್ದಾರೆ. ತಕ್ಷಣ ಕೈ ತೊಳೆದು ಬಿಟ್ಟರೆ ಘಮ್ಮನೆಯ ಗಮ್ಮತ್ತು ಮತ್ತೆ ಸಿಗುವುದಿಲ್ಲ. ಈ ಬಿರಿಯಾನಿ ಪರಿಮಳ ಸಂಜೆಯ ತನಕ ಇರಲಿ ಎಂದು ತಮ್ಮ ಮೂಸಿಕೊಂಡರಂತೆ. ಅಂದರೆ ನಿಸಾರ್ ಮಾಡಿಸಿದ್ದ ಬಿರಿಯಾನಿ ರಾಜ್ ಅವರನ್ನು ಮೋಡಿ ಮಾಡಿಬಿಟ್ಟಿತಂತೆ.ಈ ಬಿರಿಯಾನಿ ಊಟದ ನೆನಪು ನಿಸಾರ್ ಮನದಲ್ಲಿ ಹಚ್ಚಹಸಿರಾಗಿ ಉಳಿಯತಂತೆ.

Leave a Comment