ನಿಷೇಧಿತ ಪ್ಲಾಸ್ಟಿಕ್ ಮಾರಾಟ: 82 ಸಾವಿರ ರೂ. ದಂಡ

 

ತುಮಕೂರು, ಜೂ. ೧೨- ಇಲ್ಲಿನ ಮಹಾನಗರ ಪಾಲಿಕೆಯ ಆಯುಕ್ತ ಟಿ. ಭೂಬಾಲನ್, ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಸೇರಿದಂತೆ ಆರೋಗ್ಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಗರದ ವಿವಿಧ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವುದು, ಫುಟ್‍ಪಾತ್‍ನಲ್ಲಿ ಕಸ ಹಾಕುವುದು ಮತ್ತಿತರ ಕಾನೂನು ಉಲ್ಲಂಘನೆಗಾಗಿ ದಂಡ ವಿಧಿಸಿ ಒಂದೇ ದಿನದಲ್ಲಿ  82,500 ರೂ. ದಂಡ ವಸೂಲಿ ಮಾಡಿದ್ದಾರೆ.

ನಗರದ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿರುವ ವೈ.ಎಚ್.ಕೆ. ಸ್ಟೋಱ್ಸ್‌ಗೆ 25,000 ರೂ., ಅರುಣ್‍ಪ್ರಾವಿಜನ್ ಸ್ಟೋಱ್ಸ್‌ಗೆ 10,000 ರೂ, ಎಸ್.ಎಲ್.ಆರ್.ಮೋಟಾರ್ಸ್ ಅಂಡ್ ಆಟೋಮೊಬೈಲ್ಸ್- 10,000 ರೂ., ಮಂಜುನಾಥ್-2000 ರೂ., ಅಕ್ರಂ- 500 ರೂ., ರಾಮಾಂಜಿನಯ್ಯ-500 ರೂ., ಸಿದ್ದೇಶ್ವರ ಆಗ್ರೋ ಕೇಂದ್ರ- 2000 ರೂ., ಎಸ್.ಎಲ್.ವಿ. ಸ್ಟೋಱ್ಸ್‌- 1000 ರೂ., ಮಾರುತಿ ಸ್ಟೋಱ್ಸ್‌- 1000 ರೂ., ಎಂ.ಬಿ.ಟಿ.- 2000 ರೂ., ಬಿ.ಎಸ್.ಎನ್.ಟ್ರೇಡರ್ಸ್ – 2,000 ರೂ., ನೇತಾಜಿ ಟ್ರೇಡಿಂಗ್ ಕೋ- 500 ರೂ., ವೈ.ಎಚ್.ಎಸ್. ಸ್ಟೋಱ್ಸ್‌-2000 ರೂ., ಜೆ.ಎಸ್. ಪ್ರಾವಿಜನ್ ಸ್ಟೋಱ್ಸ್- 10,000 ರೂ., ವಿಘ್ನೇಶ್ವರ ಬಾಳೆಹಣ್ಣು ಅಂಗಡಿ-2000 ರೂ., ಪಾರ್ವತಮ್ಮ-1000 ರೂ., ಹನುಮಂತರಾಜು- 1000 ರೂ., ನಗರದ 14ನೇ ವಾರ್ಡ್ ವ್ಯಾಪ್ತಿಯಲ್ಲಿರುವ ನೇತಾಜಿ ಸ್ಟೋಱ್ಸ್‌ಗೆ- 5,000 ರೂ., ಇತರೆ ಅಂಗಡಿಗಳಿಗೆ- 5 ಸಾವಿರ ರೂ. ಸೇರಿದಂತೆ ಒಟ್ಟು 82,500 ರೂ. ದಂಡ ವಿಧಿಸಿ ಕಟ್ಟಿಸಿಕೊಳ್ಳಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

Leave a Comment