ನಿಷೇಧಿತ ಚೀನಾ ಮಾಂಜಾ ದಾರ ಶೇಖರಣೆ; ಇಬ್ಬರ ಬಂಧನ

ಹೈದರಾಬಾದ್, ಜ ೧೨- ನಿಷೇಧಿತ ಚೀನಾ ಮಾಂಜಾ ದಾರವನ್ನು ಇರಿಸಿಕೊಂಡಿದ್ದ ಅಂಗಡಿಯ ಮೇಲೆ ದಾಳಿ ನಡೆಸಿ ೧ ಲಕ್ಷ ೬೦ ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೇಗಂಪೇಟೆಯಲ್ಲಿರುವ ಅಂಗಡಿಯ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ನಿಷೇಧಿತ ಚೀನಾ ದಾರಗಳು ಮತ್ತು ವಸ್ತುಗಳ ಪತ್ತೆಯಾಗಿವೆ. ಮುಜಾಫರ್ ಅಲಿ ಮತ್ತು ಅಕ್ಬರ್ ಅಲಿಯನ್ನು ಬಂಧಿಸಲಾಗಿದೆ.ಇವರಿಬ್ಬರೂ ಗಾಳಿಪಟದ ಅಂಗಡಿಯನ್ನು ನಡೆಸುತ್ತಿದ್ದರು. ನೈಲಾನ್ ದಾರ ಮತ್ತು ಗಾಜು ಲೇಪಿತ ದಾರಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಪಶ್ಚಿಮ ವಲಯ ಕಾರ್ಯಪಡೆಯ ಆಯುಕ್ತರು ವಿವರಿಸಿದ್ದಾರೆ.
ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಚೀನಾ ದಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆದೆಂಬ ಕಾರಣಕ್ಕಾಗಿ ಚೀನಾ ದಾರವನ್ನು ನಿಷೇಧಿಸಲಾಗಿದೆ.
ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment