ನಿವೃತ್ತ ಪೊಲೀಸರಿಗೆ ಆರೋಗ್ಯ ಯೋಜನೆ

ಹುಬ್ಬಳ್ಳಿ ಸೆ. 10 –  ಕರ್ನಾಟಕ ನಿವೃತ್ತ ಪೊಲೀಸ್ ಅಧಿಕಾರಿಗಳ  ಟ್ರಸ್ಟ್  ರೂಪೂಗೊಂಡಿದ್ದು  ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯದ  ಯೋಜನೆಯ  ಅಡಿಯಲ್ಲಿ  ನಗದು ರಹಿತ ಚಿಕಿತ್ಸೆ ಸೌಲಭ್ಯವನ್ನು   ಒದಗಿಸಲಿದೆ.
ಈ ಸೌಲಭ್ಯವನ್ನು ಕರ್ನಾಟಕ ರಾಜ್ಯದ ನಿವೃತ್ತ  ಪೊಲೀಸ್ ಅಧಿಕಾರಿಗಳು   ಕರ್ನಾಟಕ ನಿವೃತ್ತ ಪೊಲೀಸ್ ಅಧಿಕಾರಿಗಳ  ಹೆಲ್ತ ವೆಲ್ಫೇರ್  ಟ್ರಸ್ಟ್‍ನಲ್ಲಿ ಸದಸ್ಯರಾದ ನಂತರ  ಈ ಸೌಲಭ್ಯ ಪಡೆಯಬಹುದಾಗಿದೆ.  ಈ ಸೌಲಭ್ಯ ಪಡೆಯಲು  ನಿರ್ಬಂಧನೆಗಳು ಇರುತ್ತದೆ.
ಆರೋಗ್ಯ ಯೋಜನೆ ಅಡಿಯಲ್ಲಿ  ಎಲ್ಲ ನಿವೃತ್ತ ಪೊಲೀಸ್ ಅಧಿಕಾರಿಗಳು  ಹಾಗೂ ಸಿಬ್ಬಂದಿಗಳು  ಕೂಡಲೇ  ಈ ಯೋಜನೆಯ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ   ಹು-ಧಾ  ಸಿಎಆರ್, ನಿವೃತ್ತ  ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ದೂ – 9886132466/9845302993 ಗೆ ಸಂಪರ್ಕಿಸಲು  ಪ್ರಕಟಣೆಯಲ್ಲಿ ಕೋರಲಾಗಿದೆ.

Leave a Comment