ನಿವೃತ್ತ ಡಿವೈಎಸ್ಪಿ ಬಿ.ವಿ ಲಿಂಗದಾಳಗೆ ಶಿಕ್ಷೆ

ಧಾರವಾಡ (ಕರ್ನಾಟಕ ವಾರ್ತೆ) ಫೆ.19: 2009 ರಲ್ಲಿ ಕಿತ್ತೂರು ವೃತ್ತದ ಪೆÇಲೀಸ್ ಇನ್‍ಸ್ಪೆಕ್ಟರ್‍ರಾಗಿದ್ದ ಬಸವರೆಡ್ಡಿ ವೆಂಕರೆಡ್ಡಿ ಲಿಂಗದಾಳ ಅವರು ಅಂದಾಜು 1,3,7,45,000 ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದರಿ0ದ, ಆಗಿನ ಲೋಕಾಯುಕ್ತ ಡಿ.ಎಸ್.ಪಿಯಾಗಿದ್ದ ಜಿ.ಆರ್ ಪಾಟೀಲ್ ಅವರು ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3 ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶರಾದ ಹೆಚ್.ಸಿ ಶ್ಯಾಮ್ ಪ್ರಸಾದ್ ಅವರು  ಆಪಾದಿತರಾದ ಬಿ.ವಿ ಲಿಂಗದಾಳ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿ, ಭ್ರμÁ್ಟಚಾರ ನಿಯಂತ್ರಣ ಕಾಯ್ದೆ 1988 ರ ಕಲಂ 13(1) (ಇ) ಹಾಗೂ ಸಹ ಕಲಂ 13(2) ಅಡಿ 3 ವರ್ಷಗಳ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಫೆ 18 ರಂದು ಆದೇಶ ಹೊರಡಿಸಿದ್ದಾರೆ ಎಂದು ಲೋಕಾಯುಕ್ತ ಎಸ್.ಪಿ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment