ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಮಾಧಾನ

ದಾವಣಗೆರೆ, ಆ. 15- ಮಳೆಯ ವಾತಾವರಣವಿದ್ದರು ಸಹ ಜಿಲ್ಲಾಡಳಿತ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಸಿದ್ದತೆ ಕೈಗೊಂಡದಿರುವುದು ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.
ಮಳೆ ಬಂದು ಮೈದಾನವೆಲ್ಲಾ ಕೆಸರುಮಯವಾಗಿತ್ತು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಶಾಲಾ ಮಕ್ಕಳು ಕೆಸರಿನಲ್ಲಿಯೇ ಸಾಂಸ್ಕೃತಿಕ ಪ್ರದರ್ಶನ ನೀಡಿ ದೇಶ ಪ್ರೇಮ ಮೆರೆದರು. ಆದರೆ ಕೆಸರಿನಲ್ಲಿ ಪ್ರದರ್ಶನ ನೀಡಿದ್ದರಿಂದ ಮಕ್ಕಳ ಉತ್ಸಾಹಕ್ಕೆ ಕೊಂಚ ಅಸಮಾಧಾನ ಉಂಟಾಗಿದ್ದು ಕಂಡುಬಂದಿತು. ಹಾಕಿದ್ದ ವೇಷಭೂಷಣಗಳೆಲ್ಲಾ ಕೆಸರು ಮಯವಾಗಿದ್ದರಿಂದ ನೆರೆದಿದ್ದ ಸಾರ್ವಜನಿಕರು ಸಹ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಅಸಮಾಧಾನ ಹೊರಹಾಕಿದ್ದು ಕಂಡುಬಂದಿತು.

Leave a Comment