ನಿರ್ಮಾಪಕ ಗೋವರ್ಧನ್‌ಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ನಟ ವಿನೋದ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಚಲನಚಿತ್ರ ನಿರ್ಮಾಪಕ ಗೋವರ್ಧನ್ ಮೂರ್ತಿ ಅವರಿಗೆ ಹೈಕೋರ್ಟ್‌ ವಿಭಾಗೀಯ ಪೀಠ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ದೇವನಹಳ್ಳಿ ಬಳಿಯ ಬಾಗಲೂರಿನಲ್ಲಿ ಸಹನಟ ವಿನೋದ್ ಎಂಬಾತನನ್ನು ಗುಂಡಿಕ್ಕಿ ಶಿವರಾಜ್ ಕುಮಾರ್ ನಟನೆಯ ‘ಮಾದೇಸ’ ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿ ಹತ್ಯೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಬಾಗಲೂರಿನ ರೆಸಾರ್ಟ್ ನಲ್ಲಿ ಕುಡಿದ ಮತ್ತಿನಲ್ಲಿದ್ದ ಗೋವರ್ಧನ ಮೂರ್ತಿ ಅವರು ರಾಮು ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುತ್ತಿದ್ದ ವಿನೋದ್ ಎಂಬಾತನ ಹೊಟ್ಟೆಗೆ ಎರಡು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿದಾಗ ಗೋವರ್ಧನ ಸೇರಿದಂತೆ ವಿನೋದ ಮತ್ತವನ ಸ್ನೇಹಿತರು ಕೂಡ ಕುಡಿದ ಮತ್ತಿನಲ್ಲಿದ್ದರು. ರಿಯಲ್ ಎಸ್ಟೇಟ್ ವ್ಯವಹಾರವನ್ನು ಕೂಡ ನಡೆಸುವ ಮೂರ್ತಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಕೊಲೆಯಾಗಿತ್ತು,

Leave a Comment