ನಿರ್ಮಾಪಕಿ ವಂದನಾ, ನಟಿ ಸಂಜನಾ ಕಿತ್ತಾಟ

ಬೆಂಗಳೂರು, ಡಿ 27 – ಚಿತ್ರನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕಿ ವಂದನಾ ನಡುವೆ ಕಿತ್ತಾಟ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ
ಡಿ 24ರಂದು ಖಾಸಗಿ ಪಬ್ ವೊಂದರಲ್ಲಿ ಪಾರ್ಟಿ ಗುಂಗಿನಲ್ಲಿದ್ದ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ನಡುವೆ ಮಾತಿಗೆ ಮಾತು ಬೆಳೆದು, ಈ ವೇಳೆ ಸಂಜನಾ ವಿಸ್ಕಿ ಬಾಟಲ್‍ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ

ಘಟನೆ ನಂತರ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿದ ವಂದನಾ, ಸಂಜನಾ ವಿರುದ್ಧ ದೂರು ದಾಖಲಿಸಿರುವುದಾಗಿ ಕೇಂದ್ರ ವಿಭಾಗ ಡಿಸಿಪಿ ಚೇತನ್‍ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಈ ಕುರಿತು ಖಾಸಗಿ ವಾಹಿನಿಯೊಂದು ಸಂಜನಾ ಅವರ ಪ್ರತಿಕ್ರಿಯೆಗೆ ಪ್ರಯತ್ನಿಸಿದಾಗ, “ಏನೂ ಆಗಿಲ್ಲ” ಎಂದು ಕೂಗಾಡಿದ್ದಾರೆ. ಆದರೆ ಚೇತನ್ ಸಿಂಗ್ ಅವರ ಹೇಳಿಕೆ ಕೇಳುತ್ತಿದ್ದಂತೆ ತಣ್ಣಗಾಗಿ, ವಂದಾನ ಜತೆ ಜಟಾಪಟಿಯಾಗಿದ್ದು ನಿಜ. ಅದೇನೂ ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ. “ನಾನು ಮತ್ತು ದೂರು ವಂದನಾ ಇಬ್ಬರೂ ಗೆಳತಿಯರು. ಗೆಳತಿಯರು ಎಂದಾಗ ಒಂದು ಮಾತು ಬರುತ್ತೆ ಹೋಗುತ್ತೆ. ನಮ್ಮ ನಡುವೆಯೂ ಹೀಗೆಯೇ ಆಗಿದೆ ಅಷ್ಟೆ. ಇದಕ್ಕೆ ಮಸಾಲೆ ಸೇರಿಸುವ ಅಗತ್ಯವಿಲ್ಲ. ನಾನು ನಮ್ಮ ಮನೆಯಲ್ಲಿ ಆರಾಮಾಗಿದ್ದೇನೆ. ಅವರು ಕೂಡ ಅವರ ಮನೆಯಲ್ಲಿ ಹಾಯಾಗಿದ್ದಾರೆ. ಗಲಾಟೆ ದೃಶ್ಯ ನನ್ನ ಅಣ್ಣನ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಅಗತ್ಯವಿದ್ದರೆ ನಾನು ವಿಡಿಯೋ ನೀಡುತ್ತೇನೆ,” ಎಂದು ಹೇಳಿದ್ದಾರೆ.

ಇವರಿಬ್ಬರ ಕಿತ್ತಾಟ, ಇಲ್ಲಿಗೇ ಮುಗಿಯುತ್ತದೋ ಅಥವಾ ನಿರ್ಮಾಪಕಿ ವಂದನಾ, ಸಂಜನಾ ವಿರುದ್ಧ ನ್ಯಾಯಾಲಯದ ಅನುಮತಿ ತಂದು ಎಫ್‍ಐಆರ್ ದಾಖಲೆಗೆ ಮುಂದಾಗುತ್ತಾರೋ ಕಾದುನೋಡಬೇಕಿದೆ. ವಂದನಾ ಅವರು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡರೆ ಎಫ್‍ಐಆರ್ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment