ನಿರ್ಮಲಾ ಹೇಳಿಕೆ ಕಾಂಗ್ರೆಸ್ ಗೇಲಿ

ನವದೆಹಲಿ, ಸೆ. ೧೧- ದೇಶದ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಬಿಜೆಪಿ ಸರ್ಕಾರ, ಆರ್ಥಿಕ ಕ್ಷೇತ್ರದ ಕುಸಿತಕ್ಕೆ ಏನೇನೋ ಕಾರಣಗಳ ಸಬೂಬು ಹೇಳುತ್ತಿದೆ ಎಂದು ನಿನ್ನೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದ ಓಲಾ ಊಬರ್ ಹೇಳಿಕೆಯನ್ನು ಕಾಂಗ್ರೆಸ್ ಗೇಲಿ ಮಾಡಿದೆ.

ತಮ್ಮ ಸಂಚಾರಕ್ಕಾಗಿ ಓಲಾ ಊಬರ್ ಮೊರೆಹೋಗುವ ಜನರ ಮನಃಸ್ಥಿತಿ ಬದಲಾವಣೆಯೂ ಮೋಟಾರು ಉದ್ಯಮದಲ್ಲಿಯ ಹಿಂಜರಿತಕ್ಕೆ ಕಾರಣ ಎಂದು ನಿನ್ನೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಆ ಕುರಿತಂತೆ, ಇಂದು ಗೇಲಿ ಮಾಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಘ್ವಿ, ದೇಶದ ಆರ್ಥಿಕ ಹಿನ್ನೆಡೆಗೆ ಈಗ ಬಿಜೆಪಿ ಸರ್ಕಾರ ಮತದಾರರು ಕಾರಣವನ್ನಾಗಿಸುತ್ತಿದೆ ಎಂದರು. ಇನ್ನುಮುಂದೆ ಬಸ್ ಮತ್ತು ಟ್ರಕ್‌ಗಳ ಮಾರಾಟ ಕುಸಿತಕ್ಕೂ ಜನರ ಮನೋಭಾವವೇ ಕಾರಣ ಎಂದೂ ಬಿಜೆಪಿ ದೂರಬಹುದು ಎಂದು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ ೫೦ ದಶಲಕ್ಷ ಮೀರಿದೆ. ಅವರ ಆರ್ಥಿಕ ಗುರಿ ೫ ತ್ರಿಲಿಯನ್ ಡಾಲಱ್ಸ್, ಆದರೆ, ಯುವಕರಿಗೆ ಉದ್ಯೋಗ ಯಾಕೆ ಸಿಗುತ್ತಿಲ್ಲ. ಇದಕ್ಕೂ ವಿರೋಧ ಪಕ್ಷದ ಕಾರಣವೇ? ಎಂದಿರುವ ಮನು ಸಿಂಘ್ವಿ ಏನೇನೂ ಒಳ್ಳೆಯದಾಗುತ್ತದೋ ಅದೆಲ್ಲ ಮೋದಿ ಹೆಸರಿಗೆ, ಕೆಟ್ಟದಾಗುವುದೆಲ್ಲ ಬೇರೆಯವರ ಹೆಸರಿಗೆ. ಇದಕ್ಕಾಗೇ ಈ ಸರ್ಕಾರವನ್ನು ಜನ ಆಯ್ಕೆ ಮಾಡಿದ್ದಾರೆಯೇ? ಎಂದಿದ್ದಾರೆ.

Leave a Comment