ನಿರ್ಮಲಾ ಬೆಣ್ಣೆ: ಉಪಹಾರ ಪಾಕೆಟ್ ವಿತರಣೆ

ರಾಯಚೂರು.ಏ.7- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಡವರು ಸಂಕಷ್ಟಕ್ಕೀಡಾಗಿದ್ದು, ಬಡವರಿಗೆ ಹಾಗೂ ರೋಗಿಗಳಿಗೆ ಆಹಾರದ ಪೊಟ್ಟಣ ಮತ್ತು ಕುಡಿಯುವ ನೀರಿನ ಬಾಟಲ್‌ಗಳನ್ನು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣೆ ವಿತರಿಸಿದರು.
14 ದಿನದ ಆಹಾರ ವಿತರಣೆ ಕಾರ್ಯಕ್ರಮವನ್ನು ಕೊರೊನಾ ಭೀತಿ ತಡೆಗಟ್ಟುವುದಕ್ಕಾಗಿ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದು, ಆರೋಗ್ಯ ಕೇಂದ್ರ ಸಿಬ್ಬಂದಿಗಳಿಗೆ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಇಂದು ಮುಂಜಾನೆ ಉಪಹಾರದ ಪಾರ್ಸೆಲ್‌ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷೆ ಎನ್.ರೇಣುಕಾ ಉಪಸ್ಥಿತರಿದ್ದರು.

Leave a Comment