ನಿರ್ದೇಶಕರಿಂದ ಸುಳ್ಳು ಪತ್ರ ಆರೋಪ

ರಾಯಚೂರು.ಜು.17- ನಗರದ ಯಕ್ಲಾಸಪೂರು ಗ್ರಾಮದ 10 ಎಕರೆ 10 ಗುಂಟೆ ಜಮೀನನ್ನು ಕಬ್ಜಾ ಮಾಡಿರುವ ಖಾಸಗಿಯವರಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ನಿರ್ದೇಶಕರು ಸುಳ್ಳು ಪತ್ರ ಬರೆದಿದ್ದಾರೆಂದು ವೀರಗುಂಡಯ್ಯ ಸ್ವಾಮಿ ವಕೀಲರು ಆರೋಪಿಸಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಯಕ್ಲಾಸಪೂರು ಗ್ರಾಮದ 10 ಎಕರೆ 10 ಗುಂಟೆ ಜಮೀನಿಗೆ ಸಂಬಂಧಿಸಿ ಖಾಸಗಿಯವರು ಕಬ್ಜಾ ಮಾಡಿರುವ ಸ್ಥಳ ಸ್ವಾಧೀನಪಡಿಸಿಕೊಳ್ಳಲು ಯಾವುದೇ ಆದೇಶ ನೀಡದಿದ್ದರೂ, 2008 ರ ಮಾರ್ಚ್ 17 ರಂದು ಶಿಕ್ಷಣ ಇಲಾಖೆ ನಿರ್ದೇಶಕರು ಅಂದಿನ ಜಿಲ್ಲಾಧಿಕಾರಿಗಳಿಗೆ ಸುಳ್ಳು ಪತ್ರ ಬರೆದಿರುವ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆ ಮಾಡಿರುವ ಅರ್ಜಿಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.

2007 ರ ಜು.23 ರಂದು ಸಿವಿಲ್ ನ್ಯಾಯಾಲಯ ರಾಯಚೂರುರವರ ಆದೇಶ ಪರಿಶೀಲಿಸಲಾಗಿ ಅರ್ಜಿದಾರ ಸೂಕ್ತ ದಾಖಲಾತಿ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯವೂ ಉದ್ದೇಶಿತ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮೇಲ್ಕಂಡ ಜಮೀನಿಗೆ ಸಂಬಂಧಿಸಿ ಯಾವುದೇ ಆದೇಶ ನೀಡದಿದ್ದರೂ ಸುಳ್ಳು ಪತ್ರದಲ್ಲಿರುವ ನಿರ್ದೇಶಕರ ವಿರುದ್ಧ ಸಂಬಂಧಪಟ್ಟವರು ಕಾನೂನು ಕ್ರಮವಹಿಸುವಂತೆ ಆಗ್ರಹಿಸಿದರು.

Leave a Comment