ನಿರ್ದೇಶಕನಾಗಿ ಸಂಜಯ್ ದತ್

ಮುಂಬಯಿ, ಏ 15 – ಬಾಲಿವುಡ್ ನಟ ಸಂಜಯ್ ದತ್ ಈಗಾಗಲೇ ಹಲವಾರು ಉತ್ತಮ ಚಿತ್ರಗಳಲ್ಲಿ ನಟಿಸಿದ್ದು, ಈಗ ಚಿತ್ರ ನಿರ್ದೇಶನ ಮಾಡುವುದಕ್ಕೆ ಸಿದ್ಧರಾಗಿದ್ದಾರೆ.

ಸಂಜಯ್ ಅಭಿನಯಿಸಿರುವ ‘ಕಲಂಕ್’ ಇದೇ ಏಪ್ರಿಲ್ 17ರಂದು ತೆರೆಗೆ ಬರಲಿದ್ದು, ‘ಪಾಣಿಪತ್’, ‘ಪ್ರಸ್ಥಾನಂ’ ಹಾಗೂ ‘ಶಮ್ ಶೇರ್’ ಚಿತ್ರಗಳು ಇನ್ನು ಬಿಡುಗಡೆಗೊಳ್ಳದೆ ಬಾಕಿ ಉಳಿದಿವೆ. ಈ ನಡುವೆ ಶೀಘ್ರವೇ  ಅವರು ನಿರ್ದೇಶನದತ್ತ ಮುಖ ಮಾಡಲಿದ್ದಾರೆ.

ಈಗಾಗಲೇ ಚಿತ್ರಕಥೆ ಬರೆಯಲಾಗುತ್ತಿದ್ದು, ಸಂಜಯ್ ಅವರ ಚಿತ್ರ ನಿರ್ಮಾಣ ಸಂಸ್ಥೆಯಡಿ ಚಿತ್ರ ತಯಾರಾಗಲಿದೆ.

ಈ ಕುರಿತು ಮಾತನಾಡಿದ ಸಂಜಯ್ ದತ್, ”ಇದೊಂದು ಐತಿಹಾಸಿಕ ಚಿತ್ರವಾಗಿದೆ. ಇದು ನನ್ನ ಪೂರ್ವಜ ಮೊಹಯಾಲ್ ಅವರ ಕುರಿತು ಚಿತ್ರವಾಗಿದ್ದು, ಅವರು ಹುಸೇನಿ ಕ್ಷತ್ರೀಯ ಬ್ರಾಹ್ಮಣರಾಗಿದ್ದರು. ಪೈಗಂಬರ್ ಅವರ ಮೊಮ್ಮಗನಾದ ಮೊಹಯಲ್ ಕರ್ ಬಾಲಾ ಯುದ್ಧದಲ್ಲಿ ಪಾಲ್ಗೊಂಡಿದ್ದರು. ನಾನು ಚಿತ್ರದಲ್ಲಿ ಮೊಹಲ್ಲರ ಮುಖಂಡನಾಗಿದ್ದ ರಾಹೀಬ್ ಸೀನ್ ದತ್ ಅವರ ಪಾತ್ರದಲ್ಲಿ ಅಭಿನಯಿಸುವೆ. ಸದ್ಯ ಚಿತ್ರಕಥೆಯ ಮೇಲೆ ಕೆಲಸ ನಡೆಯುತ್ತಿದೆ” ಎಂದು ಅವರು ತಿಳಿಸಿದ್ದಾರೆ.

Leave a Comment