ನಿರ್ಗತಿಕರಿಗೆ ಆಹಾರ ಪದಾರ್ಥಗಳ ವಿತರಣೆ

ಹನೂರು: ಏ.2- ಕ್ಷೇತ್ರ ವ್ಯಾಪ್ತಿಯ ಹೂಗ್ಯಂ ಗ್ರಾ.ಪಂ. ವತಿಯಿಂದ ಹೂಗ್ಯಂ ಗ್ರಾಮದಲ್ಲಿದ್ದ ಹಕ್ಕಿಪಿಕ್ಕಿ ಜನಾಂಗದ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಕರೋನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಕೈಗೊಂಡಿರುವ ಲಾಕ್‍ಡೌನ್‍ನಿಂದ ಇಲ್ಲಿನ ಹಕ್ಕಿಪಿಕ್ಕಿ ಜನಾಂಗ ಆಹಾರ ಪದಾರ್ಥಗಳನ್ನು ಖರಿದಿಸಲು ಪರದಾಡುವುದನ್ನು ಕಂಡು ಗ್ರಾ.ಪಂ. ಅಭಿವೃದ್ಧಿಕಾರಿ ಪಿಡಿಒ ಪುಷ್ಪಲತಾ ಮತ್ತು ಅಧ್ಯಕ್ಷೆ ರಾಜೇಶ್ವರಿಯವರು ಗ್ರಾಮಸ್ಥರ ಮನವಿ ಮೇರೆಗೆ ಅಗತ್ಯ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ನಿರ್ಗತಿಕರಿಗೆ ನೆರವಾಗಿದ್ದಾರೆ.
ಈ ಬಗ್ಗೆ ಗ್ರಾಮದ ಯುವಕ ರಮೇಶ್ ಮಾತನಾಡಿ, ಲಾಕ್‍ಡೌನ್ ಆದ ದಿನಗಳಿಂದಲೂ ಹಕ್ಕಿಪಿಕ್ಕಿ ಜನಾಂಗ ನಮ್ಮ ಗ್ರಾಮದಲ್ಲಿ ಆಹಾರ ಪದಾರ್ಥಗಳು ಇಲ್ಲದೆ ಪರದಾಡುತ್ತಿದ್ದರೂ ಈ ಬಗ್ಗೆ ಸ್ಥಳಿಯ ಗ್ರಾ.ಪಂ.ಅಧ್ಯಕ್ಷರು ಹಾಗೂ ಪಿಡಿಒರವರ ಗಮನಕ್ಕೆ ತರಲಾಗಿ ಪಂಚಾಯಿತಿ ವತಿಯಿಂದ ಆಹಾರ ಪದಾರ್ಥಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

Leave a Comment