ನಿರೀಕ್ಷಣಾ ಜಾಮೀನಿಗೆ ಕಮಲ್ ನಾಥ್ ಸಂಬಂಧಿ ಮೊರೆ

ನವದೆಹಲಿ, ಆ ೧೩- ಅತಿಗಣ್ಯ ವ್ಯಕ್ತಿಗಳಿಗೆ ಒದಗಿಸುವ ಹೆಲಿಕಾಫ್ಟರ್ ಹಗರಣದಲ್ಲಿ ಅಕ್ರಮ ಹಣ ರವಾನೆ ಪ್ರಕರಣದಲ್ಲಿ ಉದ್ಯಮಿ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಸಂಬಂಧಿ ರತುಲ್ ಪುರಿ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಸಿ.ಹರಿಶಂಕರ್ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ. ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನದ ನಂತರ ನಡೆಯಲಿದೆ. ವಿಚಾರಣಾ ನ್ಯಾಯಾಲಯ ಆ.೬ರಂದು ರತುಲ್ ಪುರಿಯವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಗೊಳಿಸಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.
ಎಂದು ವಕೀಲ ಅಜಯ್ ಅಗರ್ ವಾಲ್ ನ್ಯಾಯಪೀಠಕ್ಕೆ ತಿಳಿಸಿದರು.
ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ರತುಲ್ ಪುರಿ ವಿರುದ್ಧ ಆ.೯ರಂದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.

Leave a Comment