ನಿರಾಸೆಯೊಂದಿಗೆ ಹುಸೇನ್ ಬೋಲ್ಟ್ ವಿದಾಯ

ಲಂಡನ್, ಆ.೧೩: ಶರವೇಗದ ಸರದಾರ ಜಮೈಕಾದ ಉಸೇನ್ ಬೋಲ್ಟ್ ಸೋಲಿನೊಂದಿಗೆ ಟ್ರ್ಯಾಕ್‌ಗೆ ವಿದಾಯ ಹೇಳಿದ್ದಾರೆ.

 ವೃತ್ತಿ ಜೀವನದ ಕೊನೆಯ ರೇಸ್‌ನಲ್ಲಿ ಬೋಲ್ಟ್, ಗಾಯದ ಕಾರಣದಿಂದ ಓಟವನ್ನು ಪೂರ್ತಿಗೊಳಿಸದೆ ತೀವ್ರ ನಿರಾಸೆಗೆ ಒಳಗಾದರು. ಲಂಡನ್‌ನ ಒಲಿಂಪಿಕ್ಸ್ ಸ್ಟೆಡಿಯಂನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ೪ ಘಿ ೪೦೦ ರಿಲೇಯ ಫೈನಲ್ ಬೋಲ್ಟ್ ಅವರ ಕೊನೆಯ ಎಂಬ ರೇಸ್ ಎಂಬ ಕಾರಣದಿಂದ ತೀವ್ರ ಕುತೂಹಲ ಕೆರಳಿಸಿತ್ತು. ೧೦೦ ಮೀಟರ್ ಓಟದಲ್ಲಿ ಬೋಲ್ಟ್‌ರನ್ನು ಹಿಂದಿಕ್ಕಿ ಚಿನ್ನ ಗೆದ್ದಿದ್ದ ಗ್ಯಾಟ್ಲಿನ್‌ರನ್ನು ಒಳಗೊಂಡ ಅಮೆರಿಕದ ತಂಡ ಇಲ್ಲಿಯೂ ಕೂಡ ಬೋಲ್ಟ್ ಪ್ರತಿನಿಧಿಸಿದ ಜಮೈಕಾಗೆ ತೀವ್ರ ಸವಾಲೊಡ್ಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ ಅತಿಥೇಯ ಗ್ರೇಟ್ ಬ್ರಿಟನ್, ೩೭.೪೭ ಸೆಕಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿ ಚಿನ್ನದ ಒಡೆಯರಾದರು. ಅಮೆರಿಕ ಬೆಳ್ಳಿ ಹಾಗೂ ಜಪಾನ್ ತೃತೀಯ ಸ್ಥಾನ ಪಡೆಯಿತು. ಮುರನೇ ಲೇನ್‌ನಲ್ಲಿ ಓಡಿದ ಜಮೈಕಾದ ಯೊಹಾನ್ ಬ್ಲೇಕ್, ಬೋಲ್ಟ್‌ಗೆ ಬ್ಯಾಟನ್ ಹಸ್ತಾಂತರಿಸುವ ವೇಳೇ ಬ್ರಿಟನ್ ಹಾಗೂ ಅಮೆರಿಕ ಜಮೈಕಾಗಿಂತಲೂ ಮುಂದಿದ್ದವು. ಆದರೂ ಬೋಲ್ಟ್ ಅವರನ್ನು ಹಿಂದಿಕ್ಕುವ ನಿರೀಕ್ಷೆಯಿತ್ತು. ಅಮೆರಿಕಾದ ಗ್ಯಾಟ್ಲಿನ್ ಎರಡನೇ ಲೇನ್‌ನಲ್ಲಿ ಓಡಿದರೆ, ಕೋಲ್ಮನ್ ರೇಸ್ ಪೂತಿಗೊಳಿಸಿದರು. ಆ ಮೂಲಕ ವೃತ್ತಿ ಜೀವನದ ಕೊನೆಯ ರೇಸ್‌ನಲ್ಲಿ ತಮ್ಮ ಫೇವರಿಟ್ ೧೦೦ ಮೀ, ಹಾಗೂ ರಿಲೇಯಲ್ಲಿ ಬೋಲ್ಟ್ ಕೊನೆಗೂ ನಿರಾಸೆಯೊಂದಿಗೆ ವಿದಾಯ ಹೇಳಿದರು. ವೈಯಕ್ತಿಕ ವಿಭಾಗದಲ್ಲಿ ದಾಖಲೆಯ ೧೧ ವಿಶ್ವ ಅಥ್ಲೆಟಿಕ್ಸ್ ಹಾಗೂ ೮ ಒಲಿಂಪಿಕ್ಸ್ ಪದಕಗಳನ್ನು ಬೋಲ್ಟ್ ಮುಡಿಗೇರಿಸಿಕೊಂಡಿದ್ದಾರೆ

Leave a Comment