ನಿರಾಶನಾದ ಬಳಿಕ ತೀವ್ರ ಆಘಾತಕ್ಕೊಳಗಾಗಿದ್ದೆ: ಶಾಹಿದ್

ಮುಂಬೈ, ಜೂ 8 – ಬಾಲಿವುಡ್ ನಟ ಶಾಹಿದ್ ಕಪೂರ್, ತಾವು ನಿರಾಶರಾದ ಬಳಿಕ ತೀವ್ರ ಆಘಾತಕ್ಕೊಳಗಾಗಿದ್ದೆ. ಆದರೆ, ಅದರಿಂದ ಈಗ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ.
ಮನಸ್ಸು ಮುರಿದ ನಂತರ ತಮ್ಮನ್ನು ತಾವೇ ಹಾನಿಯನ್ನುಂಟು ಮಾಡಲು ಇಚ್ಛಿಸಿದ ಸ್ಥಿತಿಯನ್ನು ಎದುರಿಸಿದ್ದೇನೆ ಎಂದು ಶಾಹಿದ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮನ್ನು ನಕಾರಾತ್ಮಕ ಭಾವನೆಗಳಿಂದ ಹೊರಬರಲು ತಮ್ಮನ್ನು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೊಂದೆ ಮಾರ್ಗವಾಗಿತ್ತು. “ಕಬೀರ್ ಸಿಂಗ್” ಚಿತ್ರದಲ್ಲಿ ಶಾಹಿದ್ ಕಪೂರ್, ತಮ್ಮ ಪ್ರೀತಿಯನ್ನು ಕಳೆದುಕೊಂಡು ನಿರಾಶನಾದ ಓರ್ವ ಸರ್ಜನ್ ತನ್ನಷ್ಟಕ್ಕೆ ಹಾನಿ ಉಂಟು ಮಾಡಿಕೊಳ್ಳಲು ಪ್ರಯತ್ನಿಸುವ ಪಾತ್ರ ಅಭಿನಯಿಸಿದ್ದಾರೆ.
ಮನಸ್ಸು ಮುರಿದ ನಂತರ ತೀವ್ರ ಆಘಾತಕ್ಕೊಳಗಾದ ಸ್ಥಿತಿಯನ್ನು ಎದುರಿಸಿರುವುದಾಗಿ ಶಾಹಿದ್ ಹೇಳಿದ್ದು, ತನ್ನಷ್ಟಕ್ಕೆ ಹಾನಿ ಉಂಟು ಮಾಡಿಕೊಳ್ಳಲು ಇಚ್ಛಿಸಿದ್ದೆ ಹಾಗೂ ಪ್ರತಿ ಕ್ಷಣ ವಿಚಾರ ಮತ್ತು ಚಿಂತೆಯಲ್ಲಿ ಮುಳುಗಿರುತ್ತಿದ್ದೆ ಎಂದು ತಿಳಿಸಿದ್ದಾರೆ.
ಕೆಲವರು ಏನು ವಿಚಾರ ಮಾಡುತ್ತಾರೋ ಅದನ್ನು ತೋರಿಸಿಕೊಳ್ಳುತ್ತಾರೆ. ಆದರೆ, ಕೆಲವರು ತಮ್ಮ ಭಾವನೆಗಳನ್ನು ಅದುಮಿಡುತ್ತಾರೆ. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಸಿಟ್ಟು ಕೂಡ ಅಷ್ಟೇ ಇರುತ್ತದೆ. “ಕಬೀರ್ ಸಿಂಗ್” ಎಲ್ಲರ ಜೀವನದಲ್ಲೂ ಬರುವ ಪಾತ್ರವಾಗಿದೆ. ಹೀಗಾಗಿ ಆ ಪಾತ್ರದೊಂದಿಗೆ ಜೊತೆಗೂಡಿದೆ ಎಂದು ಶಾಹಿದ್ ಹೇಳಿದ್ದಾರೆ.
ನಿಮ್ಮ ನಕಾರಾತ್ಮಕ ವಿಚಾರಗಳನ್ನು ಬೇರೆಡೆ ಕೇಂದ್ರೀಕರಿಸಿ ಅವುಗಳನ್ನು ಧನಾತ್ಮಕವಾಗಿ ಬದಲಿಸುವ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ ಅದು ನಿಮ್ಮನ್ನು ಮತ್ತಷ್ಟು ಆಘಾತಕ್ಕೊಳಪಡಿಸಲಿದೆ. ಮನಸ್ಸು ಮುರಿಯುವುದು ಕೂಡ ಒಂದು ರೀತಿಯ ನಕಾರಾತ್ಮಕಗಳಲ್ಲಿ ಒಂದಾಗಿದೆ. ಅವುಗಳನ್ನು ನೀವು ಬೇರೆಡೆ ಉಪಯೋಗಿಸಿಕೊಳ್ಳುವ ಕಲೆ ಕಲಿತುಕೊಳ್ಳುವ ಅವಶ್ಯಕತೆ ಇದೆ ಎಂದು ಶಾಹಿದ್ ಸಲಹೆ ನೀಡಿದ್ದಾರೆ.
ಒಂದು ವೇಳೆ ನೀವು ಹೀಗೆ ಮಾಡದಿದ್ದರೆ ನೀವು ಕೂಡ “ಕಬೀರ್ ಸಿಂಗ್” ಆಗಲಿದ್ದಿರಿ ಎಂದು ಶಾಹಿದ್ ಹೇಳಿದ್ದಾರೆ. “ಕಬೀರ್ ಸಿಂಗ್” ಜೂನ್ 21ರಂದು ಬಿಡುಗಡೆಯಾಗಲಿದೆ.

Leave a Comment