ನಿಯೋಜನೆ ಮೇಲೆ ಬೇರೆ ಇಲಾಖೆಗೆ ತೆರಳಿರುವ ಹಿರಿಯ ಅಧಿಕಾರಿಗಳು ಮಾತೃ ಇಲಾಖೆಗೆ ಬನ್ನಿ ಸಚಿವರ ಖಡಕ್ ವಾರ್ನಿಂಗ್

ಬೆಂಗಳೂರು,ಮೇ 24- ಸಹಕಾರ ಇಲಾಖೆಯಲ್ಲಿ ಹುದ್ದೆಗೆ ಸೇರಿದ ಅಧಿಕಾರಿಗಳು ಬಳಿಕ ಲಾಭದಾ ಯಕ ಇಲಾಖೆಗಳಿಗೆ ಡೆಪ್ಯುಟೇಷನ್ ಮೇಲೆ ತೆರಳುತ್ತಿದ್ದರು.ಇದರಿಂದಾಗಿ ಸಹಕಾರ ಇಲಾಖೆಯಲ್ಲಿ ಅಧಿಕಾರಿಗಳು ಲೆಕ್ಕಕ್ಕ ಮಾತ್ರ ಸಿಗುತ್ತಿದ್ದರೂ ಆದರೆ ಕೆಲಸಕ್ಕೆ ಮಾತ್ರ ಸಿಬ್ಬಂದಿಗಳಿ ಸಿಗುತ್ತಿರಲಿಲ್ಲ.

ಈ ಮೊದಲು ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಗೆಂದು ನೇಮಕ ಮಾಡಿಕೊಳ್ಳಲಾ ಗಿದ್ದರೂ, ಇಲ್ಲಿ ಹೆಚ್ಚಿನ ಕೆಲಸದ ಒತ್ತಡಗಳಿಲ್ಲದ ಕಾರಣ, ಬೇರೆ ಬೇರೆ ಇಲಾಖೆಗಳಿಗೆ ಹಲವರು ಡೆಪ್ಯೂಟ್ ಆದವರೋ ಇಲ್ಲವೇ ಒಒಡಿ ಮೇಲೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಇದರಿಂದ ಇಲಾಖೆಯಲ್ಲಿ ಕಡತ ವಿಲೇ ವಾರಿ ಸೇರಿದಂತೆ ಕಾರ್ಯಕ್ರಮಅನುಷ್ಟಾನ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಇಲಾಖಾ ಪರಿಶೀಲನೆ ವೇಳೆ ಸಚಿವರಿಗೆ ಮನದಟ್ಟಾಗಿದೆ.

ಈ ಬಗ್ಗೆಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಸಹಕಾರ ಇಲಾಖೆ ಸಿಬ್ಬಂದಿಗಳನ್ನು ಮರಳಿ ಮಾತೃ ಸಂಸ್ಥೆಗೆ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

ಸಹಕಾರ ಇಲಾಖೆಯಿಂದ ಅಲ್ಪಸಂಖ್ಯಾತರ ನಿರ್ದೇಶನಾಲಯ,ಸಚಿವಾಲಯ,ಸಚಿವರ ಆಪ್ತ ಸಹಾಯಕರು, ಆಪ್ತ ಕಾರ್ಯದರ್ಶಿಗಳು,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,ವಿವಿಧ ಜಿಲ್ಲೆಗಳಲ್ಲಿ ಇರುವ ಕೌಶಲ್ಯಾಭಿ ವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿಗಳು ಸೇರಿದಂತೆ ಅನೇಕ ಕಡೆ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಹೀಗೆ ಹೋದವರು ಅಲ್ಲಿಯೇ ಬಹಳಷ್ಟು ವರ್ಷಗಳಿಂದ ಆಯಕಟ್ಟಿನ ಜಾಗದಲ್ಲಿ ನೆಲೆಯೂರಿದ್ದಾರೆ.ಈಗ ಅವರನ್ನು ಪುನಃ ಸಹಕಾರ ಇಲಾಖೆಗೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಸಹಕಾರ ಇಲಾಖೆ ಈಗ ಹಿಂದೆಂದಿಗಿಂತಲೂ ಹೆಚ್ಚು ಕಾರ್ಯಭಾರವಿದೆ.ಆದರೆ ಈ ಕೆಲದ ಒತ್ತಡಕ್ಕೆ ಸಿಬ್ಬಂದಿ ಸಾಲುತ್ತಿಲ್ಲ.ಹಲವು ಬ್ಯಾಂಕ್ ಗಳಲ್ಲಿ ಸಾಲ ವಸೂಲಾತಿಯ ಸಮಸ್ಯೆಯಾಗುತ್ತಿದೆ. ಜೊತೆಗೆ ಸಮಯಕ್ಕೆ ಸರಿಯಾ ಗಿ ಕೆಲಸವನ್ನು ಪೂರ್ತಿಗೊಳಿಸಲು ಆಗುತ್ತಿಲ್ಲ. ಹೀಗಾಗಿ ಹಾಕಿಕೊಂಡ ಗುರಿ (ಟಾರ್ಗೆಟ್) ಮುಟ್ಟಲೂ ಸಮಸ್ಯೆ ಯಾಗುತ್ತಿದೆ.ಇತ್ತೀಚಗೆ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಸಹಕಾರ ಸಚಿವರಿಗೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ವಿಷಯ ಗಮನಕ್ಕೆ ತಂದಿದ್ದಾರೆ.ಇದರಿಂದ ಅಸಮಾಧಾನಗೊಂಡ ಸಚಿವರು, ಹೀಗೆ ಯಾವ ಯಾವ ಕಡೆ ಇಲಾಖೆಯ ಎಷ್ಟೆಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ? ಇಲಾಖೆಯಲ್ಲಿ ಎಲ್ಲೆಲ್ಲಿ ಯಾವ ಯಾವ ಹುದ್ದೆಗಳಿಗೆ ಅತಿ ಅವಶ್ಯಕತೆ ಇದೆ ಎಂಬ ಬಗ್ಗೆ ತಕ್ಷಣ ತಮಗೆ ವರದಿ ಸಲ್ಲಿಸಬೇಕು ಎಂದು ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದರು.

ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನಾ ಇಲಾಖೆಯಿಂದ ಉಪ ನಿಬಂಧಕರು,ಉಪ ನಿರ್ದೇಶಕರು, ಜಂಟಿ ನಿಬಂಧಕರು, ಜಂಟಿ ನಿರ್ದೇಶಕರು ಹಾಗೂ ಅಪರ ನಿಬಂಧಕರು,ಅಪರ ನಿರ್ದೇಶಕರು ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಹೀಗೆ ಹಲವಾರು ವರ್ಷಗಳಿಂದ ಇನ್ನಿತರ ಇಲಾಖೆಗಳಲ್ಲಿ ನಿಯೋಜನೆಗೊಂಡು ಕಾರ್ಯನಿರ್ವ ಹಿಸುತ್ತಿದ್ದು, ಇಂಥವರನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಿರುಗುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಲ್ಲಿಸಿದ್ದರು.

ಇತ್ತೀಚಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹಕಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆ ಸಿದ ಸಂದರ್ಭದಲ್ಲಿ ಸಹಕಾರ ಸಚಿವರು ಇಲಾಖೆಯ ಸಿಬ್ಬಂದಿ ಬೇರೆಡೆ ನಿಯೋಜನೆಗೊಂಡಿರುವ ಬಗ್ಗೆ ಮುಖ್ಯ ಮಂತ್ರಿಗಳ ಗಮನಕ್ಕೆ ತಂದರು.ಮುಖ್ಯಮಂತ್ರಿ ಅವರು ತಕ್ಷಣವೇ ಅಗತ್ಯ ಕ್ರಮ ಕೈಗೊಂಡು ಸಿಬ್ಬಂದಿಗಳು ಮಾತೃ ಇಲಾಖೆ ಸೇವೆಗೆ ಬಳಸಿಕೊಳ್ಳಿ ಎಂದು ನಿರ್ದೇಶನ ನೀಡಿದ್ದರು.ಅಂತೆಯೇ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕಾರ್ಯಪ್ರವೃತ್ತರಾಗಿದ್ದು ನಿಯೋಜನೆಗೊಂಡಿರುವ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಸಹಕಾರ ಇಲಾಖೆ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದಾರೆ.

ಸಚಿವರೇನೋ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಮಾತೃ ಇಲಾಖೆಗೆ ಕಳುಹಿಸಿ ಕೊಡುವಂತೆ ಕೋರಿದ್ದಾರೆ. ಮುಖ್ಯಮಂತ್ರಿಗಳು ಒಪ್ಪಿದ್ದಾರೆ.ಆದರೆ ಪ್ರಮುಖ ಆಯಕಟ್ಟಿನ ಹುದ್ದೆಗಳಲ್ಲಿರುವ 50ಕ್ಕೂ ಹೆಚ್ಚು ಹಿರಿಯ ಅಧಿ ಕಾರಿಗಳು ಸರ್ಕಾರ ಮತ್ತು ಸಚಿವರ ಮೇಲೆ ಒತ್ತಡ ಹೇರಿ ವಾಪಸ್ ಮಾತೃ ಇಲಾಖೆಗೆ ಬರುತ್ತಾರೆಯೇ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

Share

Leave a Comment