ನಿಮ್ಮ ಸ್ಮರಣೆಯೇ ಅಮರ ಪ್ರೀತಿ” ಅಂಬಿಯನ್ನು ನೆನೆದು ಸುಮಲತಾ ಟ್ವೀಟ್

ಬೆಂಗಳೂರು, ಮೇ 29 -ಇಂದು ದಿವಂಗತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ 68ನೇ ಜನ್ಮದಿನ. ಕೊರೋನಾ ಲಾಕ್ ಡೌನ್ ಕಾರಣ, ಅವರ ಸಮಾಧಿಯ ಬಳಿಗೆ ತೆರಳಲಾಗದೆ, ಅಭಿಮಾನಿಗಳು ಸರಳವಾಗಿ ಹುಟ್ದಬ್ಬ ಆಚರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಂತೂ ಅಭಿಮಾನದ ಮಹಾಪೂರವೇ ಹರಿದು ಬರುತ್ತಿದೆ. ಪತ್ನಿ ಸುಮಲತಾ, “ ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ” ಎಂದು ಟ್ವೀಟ್ ಮಾಡಿದ್ದಾರೆ.

“ಅಂಬಿ ಬದುಕಿದ್ದರೆ 68ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿ ಅವರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅವರ ಹೃದಯ ವಿಶ್ವದಂತೆ. ಜೀವನದಲ್ಲಿ ಅವರೊಂದಿಗೆ ಕೆಲವು ಹೆಜ್ಜೆಗಳನ್ನು ಹಾಕಿದ್ದು ಹೆಮ್ಮೆ ಎನಿಸುತ್ತಿದೆ” ಎಂದು ಮತ್ತೊಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನು, ಅಂಬರೀಶ್ ಮಗ ಅಭಿಷೇಕ್ ಅಂಬರೀಶ್ ಸುಕ್ಕಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಫಸ್ಟ್ ಪೋಸ್ಟರ್ಗಳು ಕೂಡ ರಿಲೀಸ್ ಆಗಿದ್ದವು. ಇಂದು ಈ ಸಿನಿಮಾದ ಫಸ್ಟ್‌ಲುಕ್ ವಿಡಿಯೋ ಇಂದು ರಿಲೀಸ್ ಆಗಲಿದೆ. ಅನೇಕರು ಅಂಬರೀಶ್ ಮೇಲೆ ಇಟ್ಟಷ್ಟೇ ಗೌರವವನ್ನು ಅಭಿಷೇಕ್ ಮೇಲೂ ಇಟ್ಟಿದ್ದಾರೆ. ಈ ಕಾರಣಕ್ಕೆ ಅಂಬಿ ಅಭಿಮಾನಿಗಳಿಗೆ ಫಸ್ಟ್‌ಲುಕ್ ವಿಡಿಯೋ ಗಿಫ್ಟ್ ಆಗಿ ಸಿಗಲಿದೆ.

ಕನ್ನಡ ಚಿತ್ರರಂಗಕ್ಕೆ ಖಳನಟ ಜಲೀಲನಾಗಿ ಎಂಟ್ರಿ ಪಡೆದು ಚಂದನವನದ ದೊಡ್ಡಣ್ಣನಾಗಿ ಬೆಳೆದ ಅಂಬರೀಶ್ ಅವರು 2018 ನವಂಬೆಬರ್ 24ರಂದು ವಿಧಿವಶರಾದರು. ನಂತರ ಅವರ ಪತ್ನಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ, ಅವರ ಮಗ ಅಭಿಷೇಕ್ ಮೊದಲ ಸಿನಿಮಾ ರಿಲೀಸ್ ಆಗಿತ್ತು. ಈಗ ಅಭಿಷೇಕ್ ಎರಡನೇ ಸಿನಿಮಾ ಕೆಲಸಗಳು ಆರಂಭಗೊಂಡಿವೆ.

ಮಗನೂ ಸಹ ಅಪ್ಪನಂತೆ ಸ್ಯಾಂಡಲ್ ವುಡ್ ನಲ್ಲಿ ಮೆರೆಯಬೇಕು ಎಂದು ಅಂಬಿ ಅಭಿಮಾನಿಗಳ ಮಹದಾಸೆಯಾಗಿದೆ.

Share

Leave a Comment