ನಿಮಗೆ ನಾಯಕ ಬೇಕೇ ಟ್ವಿಟ್‌ನಲ್ಲಿ ಉಪ್ಪಿ ಪ್ರಶ್ನೆ

ಬೆಂಗಳೂರು, ಜ ೧೧- ನಟ-ನಿರ್ದೇಶಕ, ರಾಜಕಾರಣಿ ಉಪೇಂದ್ರ ‘ನಾಯಕ’ ಬೇಕೇ ಎಂದು ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ
ಸರ್ಕಾರದ ಬೊಕ್ಕಸದಲ್ಲಿರುವ ಒಂದೊಂದು ಪೈಸೆಯೂ ನಿಮ್ಮದು ಅಂದಮೇಲೆ ಅದರ ಮೇಲಿನ ಅಧಿಕಾರ, ನಿರ್ಧಾರ ನಿಮ್ಮದೇ ಆಗಿರಬೇಕಲ್ಲವೇ ? ಬರೀ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕ ಮತ್ತು ತಂತ್ರಜ್ಞಾನದಿಂದ ಇದನ್ನು ನೀವೇ ಮಾಡಬಹುದು ಎಂದಾದರೆ ಒಬ್ಬ ನಾಯಕ ನಿಮಗೆ ಬೇಕೇ ? ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ವಿಚಾರ ಮುಖ್ಯ ನಾನು ಎಂಬುದು ಪ್ರಜಾಕೀಯದಲ್ಲಿ ಮುಖ್ಯವಲ್ಲ ಎಂದು ಹೇಳುತ್ತಲೇ ಬರುತ್ತಿದ್ದೇವೆ. ಆ ಅರ್ಥದಲ್ಲೇ ಉಪ್ಪಿ ಚುನಾವಣೆಗೆ ನಿಲ್ಲುವುದು ಬಿಡುವುದು ಮುಖ್ಯವಲ್ಲ ನಾಯಕನ ನಿರೀಕ್ಷೆ ಬೇಡ, ವ್ಯಕ್ತಿ, ಪಕ್ಷ ನೋಡದೇ ವಿಚಾರಕ್ಕೆ ಮತ ನೀಡಬೇಕು ಎಂದು ಹೇಳಿದ್ದೆ. ಇದು ಸರಿಯಲ್ಲವೇ ? ಈ ವ್ಯವಸ್ಥೆ ತರುವುದೇ ನಮ್ಮೆಲ್ಲರ ಜವಾಬ್ದಾರಿಯಲ್ಲವೇ ಎಂದು ಉಪೇಂದ್ರ ಕೇಳಿದ್ದಾರೆ.

Leave a Comment