ನಿಫಾ ಸೋಂಕು ಪೀಡಿತ ವ್ಯಕ್ತಿ ಸ್ಥಿತಿ ಚಿಂತಾಜನಕ

ಪಾಂಡಿಚೇರಿ, ಜೂನ್ 13- ಇಲ್ಲಿನ ಜವಾಹರ್ ಲಾಲ್ ಸ್ನಾತಕೋತ್ತರ ವೈದ್ಯಕೀಯ ಸಂಶೋಧನಾ ಸಂಸ್ಥೆ ದಾಖಲಾಗಿದ್ದ ಶಂಕಿತ ನಿಫಾ ಸೋಂಕು ಪೀಡಿತ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.

ವ್ಯಕ್ತಿಯ ಸ್ಥಿತಿ ಹದಗೆಟ್ಟಿದ್ದು, ವೆಂಟಿಲೇಟರ್ ನಲ್ಲಿ ಇಡಲಾಗಿದೆ ಎಂದು ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಅಶೋಕ್ ಭಡೆ ತಿಳಿಸಿದ್ದಾರೆ. ವ್ಯಕ್ತಿಯ ರಕ್ತದ ಮಾದರಿಯನ್ನು ಪುಣೆಯ ಸೂಕ್ಷ್ಮಾಣು ರೋಗಗಳ ವೈಜ್ಞಾನಿಕ ಅಧ್ಯಯನ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಇಂದು ಅಥವಾ ಶುಕ್ರವಾರ ವರದಿ ಕೈಸೇರಬಹುದು, ವರದಿ ಬಂದ ನಂತರ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದರು.
ತಮಿಳುನಾಡಿನ ಕಡಲೂರು ಮೂಲದ ಹಾಗೂ ಕೇರಳದ ಗುರುವಾಯೂರಿನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಜೂನ್ 10 ರಂದು ನಿಫಾ ರೋಗ ಲಕ್ಷಣ ಹಾಗೂ ಅಧಿಕ ಜ್ವರದಿಂದ ಜವಾಹರ್ ಲಾಲ್ ಸ್ನಾತಕೋತ್ತರ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಾಗಿದ್ದರು ಎಂದು ತಿಳಿಸಿದರು.

Leave a Comment