ನಿತ್ಯ ಸ್ನಾನ: ಸಧೃಡ ಆರೋಗ್ಯ

ನಿತ್ಯ ಸ್ನಾನ ಮಾಡುವುದರಿಂದ ದೇಹದ ಕಲ್ಮಶ ತೆಗೆಯಬಹುದು. ಜೊತೆಗೆ ದೇಹದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾಗಿಯೇ ಅನಾದಿ ಕಾಲದಿಂದಲೂ ಸ್ನಾನಕ್ಕೆ ಮಹತ್ವ ನೀಡಲಾಗಿದೆ.
ಪ್ರತ್ಯೇಕ ಸ್ನಾನಗೃಹಗಳನ್ನು ಕಟ್ಟಲಾಗಿದೆ. ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಸ್ನಾನಕ್ಕೆ ವಿಶೇಷ ಆಧ್ಯತೆ ನೀಡಲಾಗಿದೆ. ಸ್ನಾನದಲ್ಲಿಯೇ ವಿವಿಧ ವಿಧಗಳಿವೆ.
ಇಂತಹ ಚಿಕಿತ್ಸೆಗಳಿಂದ ಆಯುರ್ವೇದದ ಶ್ರೀಮಂತಿಕೆ ಹೆಚ್ಚಿದೆ.
ಸ್ನಾನದಲ್ಲಿ ಹಬೆಯ ಸ್ನಾನ ಒಳ್ಳೆಯದು. ವಾರದಲ್ಲಿ 6-7 ಬಾರಿ ಬಿಸಿ ಹಬೆಯ ಸ್ನಾನ ಮಾ‌ಡುವುದರಿಂದ ಶೇಕಡಾ 50ರಷ್ಟು ಅಧಿಕ ರಕ್ತದೊತ್ತಡದ ಅಪಾಯ ತಡೆಯಬಹುದು.
ಅಲ್ಲದೆ ಅನಿರೀಕ್ಷಿತ ಹೃದಯಾಘಾತ ಉಂಟಾಗುವುದನ್ನು ತಡೆಯಬಹುದು ಎಂದು ಸಂಶೋಧನಾ ವರದಿಗಳು ಹೇಳಿವೆ.
ಹಬೆಯ ಸ್ನಾನದ ಬಗ್ಗೆ ಸಂಶೋಧನೆ ನಡೆಸಿರುವ ಪಿನ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಬಿಸಿ ಹಬೆಯ ಸ್ನಾನ ಮಾಡುವುದರಿಂದ ಆರೋಗ್ಯದಲ್ಲಿ ಅನುಕೂಲಕರ ಬದಲಾವಣೆ ಆಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ನಿಯಮಿತವಾಗಿ ಬಿಸಿ ಹಬೆಯ ಸ್ನಾನ ಮಾಡುವುದರಿಂದ ಬಿಸಿ ಹಬೆಯ ಸ್ನಾನ ಮಾಡುವುದರಿಂದ ಎಂಡೋಲಿಥಿಯಲ್ ಕಾರ್ಯ ಸುಧಾರಿಸುತ್ತದೆ.
ರಕ್ತನಾಳದೊಳಗೆ ಇರುವ ಪದರದ ಕಾರ್ಯವೂ ವ್ಯವಸ್ಥಿತವಾದ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಬೆವರುವ ಕ್ರಿಯೆಯಿಂದ ದೇಹದಲ್ಲಿರುವ ಅನವಶ್ಯಕ ದ್ರವವೂ ಹೊರ ಹೊಮ್ಮುತ್ತದೆ. ಇದು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

Leave a Comment