ನಿತ್ಯ ಕಂಪ್ಯೂಟರ್ ನೋಡುತ್ತೀದ್ದರೇ ಕಣ್ಣಿನ ಕಾಳಜಿ ಅವಶ್ಯ

ಕಂಪ್ಯೂಟರುಗಳು ಮೊಬೈಲು  ಇಂದಿನ ಜೀವನವನ್ನು ಎಷ್ಟು ಮಟ್ಟಿಗೆ ಬದಲಿಸಿಬಿಟ್ಟಿವೆ ಎಂದರೆ ಒಂದು ಕ್ಷಣವೂ ಇವುಗಳ ಮೇಲಿನ ಅವಲಂಬನೆಯನ್ನು ತ್ಯಜಿಸಿ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಪರಿಣಾಮವಾಗಿ, ಅನಿವಾರ್ಯವೆಂಬಂತೆ ನಾವೆಲ್ಲಾ ಒಂದಲ್ಲಾ ಒಂದು ಬಗೆಯಲ್ಲಿ ಕಂಪ್ಯೂಟರ್ ವ್ಯವಸ್ಥೆಗೆ ದಾಸರಾಗಿಯೇ ಇದ್ದೇವೆ. ತಂತ್ರಜ್ಞಾನದ ಮೂಲಕ ಕೋಟ್ಯಂತರ ಜನರಿಗೆ ಉದ್ಯೋಗ ಲಭಿಸಿದ್ದು ಜೀವನಮಟ್ಟ ಹಿಂದಿನ ದಿನಗಳಿಗಿಂತ ಎಷ್ಟೂ ಪಟ್ಟು ಮೇಲೇರಿರುವುದು ಮಾತ್ರ ಅಲ್ಲಗಳೆಯರಾಗದ ಸತ್ಯ. ಹಾಗಾಗಿ, ಉದ್ಯೋಗ ನಿಮಿತ್ತವೂ ಕಂಪ್ಯೂಟರುಗಳನ್ನು ಬಳಸುವುದು ಹಾಗೂ ಹೆಚ್ಚಿನ ಅವಧಿಯಲ್ಲಿ ಕಂಪ್ಯೂಟರ್ ಪರದೆಯನ್ನು ವೀಕ್ಷಿಸುವುದು ಅನಿವಾರ್ಯವಾಗಿದೆ.

ಕಂಪ್ಯೂಟರುಗಳನ್ನು ಬಳಸುವವರಿಗೆ ದಿನಕ್ಕೆ ಕನಿಷ್ಟವೆಂದರೂ ಸುಮಾರು ಎಂಟರಿಂದ ಒಂಭತ್ತು ಘಂಟೆಗಳ ಕಾಲ ಪರದೆಯನ್ನು ವೀಕ್ಷಿಸಬೇಕಾಗುತ್ತದೆ. ಉಳಿದ ಸಮಯದಲ್ಲಿಯೂ ತಮ್ಮ ಮೊಬೈಲುಗಳಲ್ಲಿ ಸಾಮಾಜಿಕ ಜಾಲತಾಣ, ಗೇಮ್ಸ್, ವೈಯಕ್ತಿಕ ಮಾಹಿತಿಯನ್ನು ಪಡೆಯಲೂ ಇನ್ನಷ್ಟು ಹೆಚ್ಚಿನ ಸಮಯ ಬಳಕೆಯಾಗುತ್ತದೆ. ಕಂಪ್ಯೂಟರ್ ಪರದೆ ಪುಸ್ತಕದಂತಲ್ಲ, ಏಕೆಂದರೆ ಇದು ಬೆಳಕನ್ನು ಸೂಸುವ ಉಪಕರಣವಾಗಿದೆ ಕಣ್ಣುಗಳಿಗೆ ಒತ್ತಡ ಮತ್ತು ಆಯಾಸವಾಗುವುದು ಇದೇ ಕಾರಣಕ್ಕೆ. ನಮ್ಮ ಕಣ್ಣುಗಳು ಬೆಳಕಿನ ಮೂಲವನ್ನಲ್ಲ, ಬದಲಿಗೆ ಪ್ರತಿಫಲಿತ ಬೆಳಕಿನ ಮೂಲಕವೇ ನೋಡುವಂತೆ ಪ್ರಕೃತಿ ನಿರ್ಮಿಸಿದೆ. ಆದರೆ ಇಂದಿನ ಹೆಚ್ಚಿನ ಬಹುತೇಕ ಉಪಕರಣಗಳು ಬೆಳಕಿನ ಮೂಲವೇ ಆಗಿರುವ ಕಾರಣ ಇದು ಕಣ್ಣುಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತದೆ. ಈ ಪರಿಣಾಮದ ಪ್ರತಿಫಲವೇ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಅಥವಾ ಕಂಪ್ಯೂಟರ್ ದೃಷ್ಟಿ ದೋಶ. ಇಂದು ಈ ತೊಂದರೆ ವಿಶ್ವದಾದ್ಯಂತ ಸುಮಾರು ಆರು ಕೋಟಿ ಜನರಿಗೆ ಬಾಧಿಸುತ್ತಿದೆ. ಕಂಪ್ಯೂಟರ್ ಪರದೆಯನ್ನು ವೀಕ್ಷಿಸದೇ ಉದ್ಯೋಗ ನಿರ್ವಹಣೆ ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಕಣ್ಣುಗಳ ಆರೋಗ್ಯವನ್ನು ಉಳಿಸಿಕೊಳ್ಳಬೇಕಾದರೆ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯವಾಗಿದೆ

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು? ಹೆಸರೇ ಸೂಚಿಸುವಂತೆ ಬೆಳಕು ಸೂಸುವ ಯಾವುದೇ ಪರದೆಯನ್ನು ಸತತವಾಗಿ ವೀಕ್ಷಿಸುವ ಮೂಲಕ ಎದುರಾಗಬಹುದಾದ ಒಟ್ಟಾರೆ ತೊಂದರೆಗಳನ್ನು ಕ್ರೋಢೀಕರಿಸಿ ಈ ಹೆಸರಿನಿಂದ ಕರೆಯಬಹುದು. ಸಾಮಾನ್ಯವಾಗಿ ನೇತ್ರವೈದ್ಯರು ಈ ಸ್ಥಿತಿಯನ್ನು ಡಿಜಿಟಲ್ ಕಣ್ಣಿನ ಆಯಾಸ ಎಂದು ಗುರುತಿಸುತ್ತಾರೆ. ಈ ತೊಂದರೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ, ಕಂಪ್ಯೂಟರ್ ಪರದೆ ಹಾಗೂ ಹೆಚ್ಚು ಹೊತ್ತು ಟೀವಿ ನೋಡುವ ಮಕ್ಕಳಿಗೂ ಆವರಿಸಬಹುದು. ಅದರಲ್ಲೂ ವಿಶೇಷವಾಗಿ ಬೆಳಕಿನ ಪ್ರಮಾಣ ಹೆಚ್ಚಿದ್ದರೆ ಮತ್ತು ಟೀವಿ ಕಂಪ್ಯೂಟರ್ ಪರದೆಗಳನ್ನು ನೋಡುವ ಅಂತರ ಸೂಕ್ತ ಪ್ರಮಾಣಕ್ಕೂ ಕಡಿಮೆ ಇದ್ದರೆ ಈ ಸ್ಥಿತಿ ಆವರಿಸುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ. ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎದುರಾಗಲು ಅತಿ ಸಾಮಾನ್ಯವಾದ ಕಾರಣಗಳೆಂದರೆ * ಆಂಟಿ ಗ್ಲೇರ್ ಅಥವಾ ಪ್ರತಿಫಲನವಿಲ್ಲದ ಕನ್ನಡಕಗಳನ್ನು ಸತತವಾಗಿ ಧರಿಸದೇ ಇರುವುದು * ವಯಸ್ಸಾಗುತ್ತಿದ್ದಂತೆ ನೈಸರ್ಗಿಕವಾಗಿ ಬಾಧಿಸುವ ಕಣ್ಣುಗಳ ಶಿಥಿಲತೆ * ಸರಿಪಡಿಸಿಲ್ಲದ ಕಣ್ಣುಗಳ ದೋಷಗಳು ಅಸಮರ್ಪಕ ಬೆಳಕಿನ ವ್ಯವಸ್ಥೆ ಮತ್ತು ಪ್ರಖರತೆ * ನಿಮ್ಮ ಕಂಪ್ಯೂಟರ್ ಉಪಕರಣಗಳ ಪರದೆಗಳಿಂದ ಹೊರಸೂಸುವ ಬೆಳಕಿನ ಪ್ರಖರತೆ * ಅಸಮರ್ಪಕ ಕುಳಿತುಕೊಳ್ಳುವ ಭಂಗಿ ಮತ್ತು ದೂರ

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಲಕ್ಷಣಗಳು,ಮಂಜುಮಂಜಾದ ದೃಷ್ಟಿ ಅಥವಾ ಎರಡೆರಡಾಗಿ ಕಾಣಿಸುವುದು , ಕಣ್ಣುಗಳಿಗೆ ಎದುರಾಗುವ ಆಯಾಸ , ಕಣ್ಣುಗಳ ಮುಂದೆ ತೇಲುತ್ತಿರುವ ಚಿಕ್ಕ ಚಿಕ್ಕ ವೃತ್ತಕಾರಗಳು ಕಾಣಿಸಿಕೊಳ್ಳುವುದು,ಕಣ್ಣುಗಳಲ್ಲಿ ಉರಿ ಕಾಣಿಸಿಕೊಳ್ಳುವುದು * ಒಣಗುವ ಕಣ್ಣುಗಳು * ತಲೆನೋವು * ಬೆನ್ನು ಅಥವಾ ಕುತ್ತಿಗೆಯಲ್ಲಿ ವಿಷನ್ ಸಿಂಡ್ರೋಮ್ ಇರುವಿಕೆ ಖಚಿತವಾದ ಬಳಿಕ ನೀವು ನಿಮ್ಮ ನೇತ್ರತಜ್ಞರಲ್ಲಿ ನಿಯಮಿತವಾಗಿ ಭೇಟಿ ನೀಡಿ ತಜ್ಞರ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಈ ಮೂಲಕ ಈಗಿರುವ ದೃಷ್ಟಿಯನ್ನು ಇನ್ನಷ್ಟು ಕುಂದದಂತೆ ಕಾಪಾಡಲು ಸಾಧ್ಯವಾಗುತ್ತದೆ. ಈಗಿನ ಸ್ಥಿತಿಗೆ ಅನುಗುಣವಾಗುವ ಕನ್ನಡಕ ಅಥವಾ ಕ್ಯಾಂಟ್ಯಾಕ್ಟ್ ಲೆನ್ಸ್ ಅನ್ನು ಧರಿಸಲು ನೇತ್ರತಜ್ಞರು ಸಲಹೆ ಮಾಡುತ್ತಾರೆ. ಕೆಲವರಿಗೆ ಕಂಪ್ಯೂಟರ್ ಪರದೆಯನ್ನು ವೀಕ್ಷಿಸುವ ಸಲುವಾಗಿ ವಿಶೇಷ ಕನ್ನಡಕವನ್ನು ಧರಿಸಲು ವೈದ್ಯರು ಶಿಫಾರಸ್ಸು ಮಾಡಬಹುದು. ಆದರೆ ಈ ತೊಂದರೆಯ ಚಿಕಿತ್ಸೆಯಾಗಿ ಕೇವಲ ಕನ್ನಡಕವನ್ನು ಬದಲಿಸುವುದು ಮಾತ್ರವೇ ಸಾಕಾಗುವುದಿಲ್ಲ. ಬದಲಿಗೆ ಇನ್ನೂ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ: ನಿಮ್ಮ ಕಂಪ್ಯೂಟರ್ ಪರದೆಯ ಮುಂದೆ ಇರುವ, ಮತ್ತು ನೇರವಾಗಿ ಬೆಳಕನ್ನು ಕಣ್ಣಿಗೆ ಪ್ರತಿಫಲಿಸುವಂತೆ ಇರುವ ದೀಪಗಳನ್ನು ಸ್ಥಳಾಂತರಿಸುವುದು ಅಥವಾ ಇವುಗಳ ಬೆಳಕು ನೇರವಾಗಿ ನಿಮ್ಮ ಕಣ್ಣಿಗೆ ಪ್ರತಿಫಲಿಸದಂತೆ ಕಂಪ್ಯೂಟರ್ ಇರಿಸಿರುವ ಸ್ಥಾನವನ್ನು ಕೊಂಚ ಮಾರ್ಪಾಡು ಮಾಡಿಕೊಳ್ಳುವುದು. , ಕಿಟಕಿ ಹಿಂದೆ ಬರುವಂತೆ ಕುಳಿತಿದ್ದರೆ ಈಗ ಇದಕ್ಕೆ ವಿರುದ್ಧವಾಗಿ ಕುಳಿತು ಕಿಟಕಿಯಿಂದ ಬರುವ ಬೆಳಕು ಕಣ್ಣಿನ ಅಥವಾ ಪರದೆಯ ಮೇಲೆ ನೇರವಾಗಿ ಬೀಳದಂತೆ ಬದಲಿಸುವುದು. * ಛಾವಣಿಯಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳ ಪ್ರಖರತೆಯನ್ನು ಸಂದರ್ಭಕ್ಕೆ ಅನುಗುಣವಾಗಿ ಹೆಚ್ಚಿಸುವ ಅಥವಾ ಕಡಿಮೆ ಮಾಡಬಲ್ಲ ಡಿಮ್ಮರ್ ಸ್ವಿಚ್ಚುಗಳನ್ನು ಅಳವಡಿಸುವುದು. , ನಿಮ್ಮ ಕಂಪ್ಯೂಟರ್ ಪರದೆ ನಿಮ್ಮ ಕಣ್ಣುಗಳ ಮಟ್ಟಕ್ಕೆ ಕೊಂಚವೇ ಕಡಿಮೆ ಇರುವಂತೆ ನೋಡಿಕೊಳ್ಳುವುದು. ಅಂದರೆ ಪರದೆಯ ಮೇಲಿನ ಅಂಚು ನಿಮ್ಮ ಕಣ್ಣುಗಳ ಮಟ್ಟದಲ್ಲಿದ್ದರೆ ಉತ್ತಮ. ಪರದೆ ಕಣ್ಣಿನಿಂದ ಸುಮಾರು ೨೦-೨೮ ಇಂಚುಗಳಷ್ಟು ದೂರವಿರಬೇಕು* ಸತತ ಕೆಲಸ ಮಾಡುವ ಸಮಯದಲ್ಲಿ ಪ್ರತಿ ಎರಡು ಘಂಟೆಗಳಿಗೊಮ್ಮೆ ಸುಮಾರು ಹದಿನೈದು ನಿಮಿಷಗಳವರೆಗೆ ಕಂಪ್ಯೂಟರ್ ಪರದೆಯಿಂದ ಕಣ್ಣನ್ನು ಬೇರೆಡೆಗೆ ಸೆಳೆಯಬೇಕು. * ಒಂದು ವೇಳೆ ಕಣ್ಣುಗಳು ಒಣಗಿದಂತೆ ಅನ್ನಿಸಿದರೆ ಸುಲಭವಾಗಿ ಸಿಗುವ ಕೃತಕ ಕಣ್ಣೀರು (ರೀಫ್ರೆಶ್ ಟಿಯರ್ಸ್) ಮೊದಲಾದ ಔಷಧಿಗಳನ್ನು ಬಳಸಿ. * ಸಾಧ್ಯವಾದರೆ ಕೋಣೆಯಲ್ಲಿ ಕೃತಕ ಆರ್ದ್ರತೆ ಒದಗಿಸುವ ಹ್ಯೂಮಿಡಿಫೈಯರ್ ಉಪಕರಣ ಅಳವಡಿಸಿ. ಕಿಟಕಿಗಳ ಪರದೆಯನ್ನು ಅಡ್ಡಲಾಗಿಸಿ, ಇದರಿಂದ ಕಣ್ಣುಗಳು ಒಣಗುವುದನ್ನು ತಡೆಯಬಹುದು.,ಟಮಿನ್ನು, ಖನಿಜಗಳೂ ಹಾಗೂ ಇತರ ಪೌಷ್ಟಿಕಾಂಶಗಳಿರುವ ಸಮತೋಲನದ ಆಹಾರಾಭ್ಯಾಸವನ್ನು ಅಳವಡಿಸಿಕೊಳ್ಳಿ. * ನಿಯಮಿತವಾಗಿ ಕಣ್ಣುಗಳ ವ್ಯಾಯಾಮವನ್ನು ಮಾಡುತ್ತಿರಬೇಕು. ಉದಾಹರಣೆಗೆ ಕಣ್ಣುಗಳನ್ನು ನಿಧಾನವಾಗಿ ಮುಚ್ಚುವುದು ತೆರೆಯುವುದು, ವೃತ್ತಾಕಾರದಲ್ಲಿ ಪ್ರದಕ್ಷಿಣ ಮತ್ತು ಅಪ್ರದಕ್ಷಿಣವಾಗಿ ಕಣ್ಣುಗುಡ್ಡೆಗಳನ್ನು ತಿರುಗಿಸುವುದು, ಆಗಾಗ ದೂರದ ವಸ್ತುವನ್ನು ಕೇಂದ್ರೀಕರಿಸುವುದು ಇತ್ಯಾದಿ. ಕಂಪ್ಯೂಟರ್ ಬಳಸುವಾಗ ಅನುಸರಿಸಬೇಕಾದ ಸೂಕ್ತ ಕ್ರಮಗಳು ಈ ಕೆಲವು ಸುಲಭ ಮತ್ತು ಸರಳ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

Leave a Comment