ನಿಡಗುಂದಿಯ ಮುದ್ದೇಶ್ವರ ದೇವಸ್ಥಾನದ ಹುಂಡಿ ಕಳವು

ವಿಜಯಪುರ, ಫೆ.9-ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆಯೊಂದು ನಿಡಗುಂದಿ ಪೋಲಿಸ್ ಠಾಣೆ ವ್ಯಾಪ್ತಿಯ ನಿಡಗುಂದಿ ಗ್ರಾಮದಲ್ಲಿ ನಡೆದಿದೆ.

ನಿಡಗುಂದಿ ಪಟ್ಟಣದಲ್ಲಿರುವ ಶ್ರೀ ಮುದ್ದೇಶ್ವರ ದೇವಸ್ಥಾನದಲ್ಲಿಯ ಹುಂಡಿಯಲ್ಲಿದ್ದ ಹಣ ಕಳ್ಳತನವಾಗಿದ್ದು, ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಮಾರ್ಚ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಆ ಸಂದರ್ಭದಲ್ಲಿ ಹಣ ತೆಗೆದು ಹಣ ತೆಗೆಯಲಾಗುತ್ತಿತ್ತು. ಅದರೆ ಈ ಬಾರಿ ಒಂದು ಮುಂಚಿತವಾಗಿಯೇ ಹುಂಡಿ ಹಣವನ್ನು ಕಳ್ಳತನ ಮಾಡಲಾಗಿದೆ.

ಪ್ರತಿ ವರ್ಷವೂ ಒಂದು ಲಕ್ಷಕ್ಕೂ ಅಧಿಕ ಹಣ ಆ ಹುಂಡಿಯಲ್ಲಿ ಸಂಗ್ರಹವಾಗುತ್ತಿತ್ತು. ಕಳ್ಳತನ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಗ್ರಾಮದ ಜನರು ಆಗ್ರಹಿಸಿದ್ದಾರೆ.

ನಿಡಗುಂದಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

 

Leave a Comment