ನಿಟ್ಟೂರು ಗ್ರಾಮದಲ್ಲಿ ವಾಲ್ಲೀಕಿ ಭವನ ಉದ್ಘಾಟನೆ: ಎಂ.ಪಿ.ರವೀಂದ್ರ

ಹರಪನಹಳ್ಳಿ,ಅ.12: ತಾಲ್ಲೂಕಿನ ನಿಟ್ಟೂರು ಗ್ರಾಮಕ್ಕೆ ಎರಡು ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಪಿ.ರವೀಂದ್ರ ಹೇಳಿದರು.
ಗ್ರಾಮದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಶುದ್ಧ ನೀರಿನ ಘಟಕ, ಸಿಸಿ ರಸ್ತೆ ಸೇರಿದಂತೆ ಎರಡು ಕೋಟಿ ಅನುದಾನದಲ್ಲಿ ಕಾಮಗಾರಿಗಳು ನೆಡೆದಿವೆ. ಸ್ಥಗಿತಗೊಂಡಿದ್ದ ಏತ ನೀರಾವರಿ ಯೋಜನೆಯನ್ನು ನವೀಕರಣದಿಂದ ಕಾರ್ಯರೂಪಕ್ಕೆ ತರಲಾಗಿದೆ. ದುಗ್ಗಾವತಿ ಗ್ರಾಮದಿಂದ ಮಲ್ಲಜ್ಜನ ಕಟ್ಟೆವರೆಗೆ ರಸ್ತ ಅಭಿವೃದ್ಧಿಗೆ 9 ಕೋಟಿ ಅನುದಾನ ನೀಡಲಾಗಿದೆ ಎಂದರು. ಮಾಜಿ ಸಚಿವ ಜಿ.ಕರುಣಾಕರರೆಡ್ಡಿಯವರು ಶುದ್ಧ ನೀರಿನ ಘಟಕ ಕಾರ್ಯಾರಂಭ ಆಗುವ ಮುನ್ನವೇ ಉದ್ಘಾಟಿಸಿದ್ದರು ಆದರೂ ಇಲ್ಲಿಯವರೆಗೆ ಕುಡಿಯಲು ನೀರು ಒದಗಿಸಿರಲಿಲ್ಲ. ಚುನಾವಣೆ ಸಮೀಪಿಸುತ್ತಿರುವ ಕಾರಣ ಈ ಯೋಜನೆಗಳು ಬಿಜೆಪಿ ಸರ್ಕಾರದಲ್ಲಿ ಪ್ರಾರಂಭಿಸಲಾಗಿದೆ ಎಂದು ಸುಳ್ಳು ಹೇಳುವವರು ಬರಲಿದ್ದಾರೆ ಮತದಾರರು ಎಚ್ಚರಿಕೆ ವಹಿಸಿ ಎಂದರು.
ಪಟ್ಟಣದ ಸರ್ಕಾರಿ ಬಾಲಕೀಯರ ಫ್ರೌಢಶಾಲೆಗೆ ಬೇಟಿ ನೀಡಿದ ಶಾಸಕರು ಮಳೆಗಾಲದಲ್ಲಿ ಶಾಲೆಯು ಜ¯ವೃತ್ತವಾಗುವುದನ್ನು ತಪ್ಪಿಸಲು ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾವiಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಮುಖಂಡರಾದ ಡಿ.ರಾಜಕುಮಾರ, ನಿಟ್ಟೂರು ಸೋಮಪ್ಪ, ಎಲ್.ಮಂಜ್ಯನಾಯ್ಕ್ ಹಾಗೂ ಮತಿತ್ತರರು ಭಾಗವಹಿಸಿದ್ದರು.

Leave a Comment